ಮಹಾರಾಷ್ಟ್ರ : ಇತ್ತೀಚಿಗೆ ಚಿಕ್ಕ ಮಕ್ಕಳ ಕೈಯಲ್ಲಿ ಕೂಡ ಮೊಬೈಲ್ ಎನ್ನುವುದು ಆಟದ ಸಾಮಾನಿನಂತೆ ಆಗಿದೆ. ಕೆಲವು ಮಕ್ಕಳು ಅದರಿಂದ ಒಳ್ಳೆಯದನ್ನು ಕಲಿತರೆ, ಇನ್ನೂ ಕೆಲವು ಮಕ್ಕಳು ಅದರಿಂದ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿವೆ. ಇದೀಗ ಮಹಾರಾಷ್ಟ್ರದ ಪುಣೆಯಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ.
ಸಾಮಾಜಿಕ ಜಾಲತಾಣವನ್ನು ಮೊಬೈಲ್ನಲ್ಲಿ ನೋಡುತ್ತಿದ್ದ 9 ವರ್ಷದ ಬಾಲಕ ಅದರಲ್ಲಿ ಬರುವ ವಿಡಿಯೋಗಳಿಂದ ಪ್ರಭಾವಿತನಾಗಿ 3 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಈ ಒಂದು ಘಟನೆ ಕಳೆದ ಡಿಸೆಂಬರ್ 15ರಂದು ನಡೆದಿದೆ. ಆ ಹೆಣ್ಣು ಮಗು ತನ್ನ ಮನೆಯ ಬಳಿ ಒಬ್ಬಳೇ ಇದ್ದಾಗ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆ ತನ್ನ ತಾಯಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ. ತಾಯಿ ಪೊಲೀಸರಿಗೆ ಮಾಹಿತಿ ನೀಡಿದರು.
3ನೇ ತರಗತಿಯ ಬಾಲಕನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದ ಕೇಸ್ ದಾಖಲಿಸಲಾಗಿದೆ. ಆತ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಆರೋಪದ ಮೇಲೆ 9 ವರ್ಷದ ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರುಪಡಿಸಲಾಯಿತು. ಆ ಕೋರ್ಟ್ ಅವನಿಗೆ ಜಾಮೀನು ನೀಡಿತು. ಆತನನ್ನು ಅವನ ಹೆತ್ತವರ ಜೊತೆ ಕಳುಹಿಸಿತು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.