ಉತ್ತರ ಪ್ರದೇಶ : ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ 5 ವರ್ಷದ ಬಾಲಕ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾನೆ
ಫಿರೋಜಾಬಾದ್‌ನ ನಗ್ಲಾ ಮೋತಿ ಏರಿಯಾದ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಐದು ವರ್ಷದ ವಿದ್ಯಾರ್ಥಿ ಭವದೀಪ್ ಹೃದಯಾಘಾತದಿಂದ ದುರಂತ ಸಾವನ್ನಪ್ಪಿದ್ದಾನೆ.ಶಾಲೆಗೆ ಎಂದಿನಂತೆ ಬಂದಿದ್ದ ಬಾಲಕ.. ಇದ್ದಕ್ಕಿಂತೆ ಕ್ಲಾಸ್‌ರೂಂನಲ್ಲಿ ಕುಸಿದುಬಿದ್ದಿದ್ದಾನೆ.
ಶಾಲಾ ಸಿಬ್ಬಂದಿ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡುವ ಮೂಲಕ ಅವನನ್ನು ಬದುಕಿಸಲು ಪ್ರಯತ್ನಿಸಿದರೂ ಅದು ಫಲನೀಡದೇ ಬಾಲಕನನ್ನು ಆಸ್ಪತ್ರೆಗೆ ಕರೆತರುಷ್ಟರಲ್ಲಿ ಮೃತಪಟ್ಟಿದ್ದಾನೆ.
ಆಘಾತಕಾರಿ ಘಟನೆಯಲ್ಲಿ, ಶಾಲಾ ಸಿಬ್ಬಂದಿ ಬಾಲಕನ ಸಾವಿನ ನಂತರ ಮಗುವಿನ ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಬಾಲಕನ ಕುಟುಂಬ ಆಸ್ಪತ್ರೆಗೆ ಧಾವಿಸಿ ತಕ್ಷಣ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಬಾಲಕನ ಸಾವಿಗೆ ಶಾಲಾ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮೃತ ಬಾಲಕನ ಶವ ಪರೀಕ್ಷೆಯ ನಂತರವಷ್ಟೇ ಸಾವಿನ ಕಾರಣ ಹೊರಬರಬೇಕಿದೆ.




