ಬೆಳಗಾವಿ : ಈಗಾಗಲೇ ಮೈಸೂರಿನ ರಸ್ತೆಯೊಂದಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಲು ಮುಂದಾಗಿರುವ ವಿಚಾರವು ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇತ್ತ ಕುಂದಾನಗರಿಯಲ್ಲಿ ಸಿದ್ದರಾಮಯ್ಯ ಅವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಡಿ ಎಂದು ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಮಾಹಿತಿ ನೀಡಿದ್ದಾರೆ.1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ದರಾಮಯ್ಯರ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಹೀಗಾಗಿ ಸರ್ವೋದಯ ಸಮಾಜ ರಚನೆಯ ಹರಿಕಾರ, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯಗೆಪ್ರತಿಮೆ ನಿರ್ಮಾಣ ಮೂಲಕ ನಾವು ಗೌರವ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.