Ad imageAd image

ಕೇಸರಿ ಕೃಷಿ ಮಾಡಿ, ಲಕ್ಷಾಂತರ ರೂ. ಹಣ ಗಳಿಸುವ 64 ವರ್ಷದ ಮಹಿಳೆ

Bharath Vaibhav
ಕೇಸರಿ ಕೃಷಿ ಮಾಡಿ, ಲಕ್ಷಾಂತರ ರೂ. ಹಣ ಗಳಿಸುವ 64 ವರ್ಷದ ಮಹಿಳೆ
WhatsApp Group Join Now
Telegram Group Join Now

ಲಕ್ನೋ: 64 ವರ್ಷದ ಮಹಿಳೆಯೊಬ್ಬರು ಕೇಸರಿ ಕೃಷಿ ಮಾಡಿ, ಲಕ್ಷಾಂತರ ರೂ. ಹಣ ಗಳಿಸುವ ಮೂಲಕ ಯುವ ಜನರೇ ಹುಬ್ಬೇರಿಸುವಂತೆ ಮಾಡಿರುವ ವಿಭಿನ್ನ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ವರದಿಯಾಗಿದೆ.

64 ವರ್ಷದ ಗೃಹಿಣಿ ಶುಭಾ ಭಟ್ನಾಗರ್‌ ಮಕ್ಕಳು, ಮೊಕ್ಕಳನ್ನು ಬೆಳೆಸಿದ ಬಳಿಕ ಈಗ ಕೇಸರಿ ಕೃಷಿ ಮಾಡಿ ಗಮನ ಅವರ ಈ ಉತ್ಸಾಹ ತಮ್ಮ ಕುಟುಂಬ ಮಾತ್ರವಲ್ಲದೇ ಸ್ಥಳೀಯ ಸಮುದಾಯವನ್ನೂ ಧನಾತ್ಮಕವಾಗಿ ಪ್ರಭಾವಿಸಿದೆ.

ಎರಡು ವರ್ಷದ ಯಶಸ್ವಿ ಒಳಾಂಗಣ ಕೇಸರಿ ಕೃಷಿ ಮಾಡಿರುವ ಇವರು ಕಳೆದ ವರ್ಷ 16 ಲಕ್ಷ ರೂ.ಮೌಲ್ಯದ ಕೇಸರಿ ಉತ್ಪಾದಿಸಿದ್ದಾರೆ. ಮುಂಬರುವ ವರ್ಷದಲ್ಲಿ ಇದನ್ನು ಅವರು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಈ ಬಗ್ಗೆ ಮಾತನಾಡಿರುವ ಶುಭಾ, ನಾನು ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದೆ. ಆದರೆ ಸಮಯದ ನಿರ್ಬಂಧಗಳು ಅದನ್ನು ಸಂಪೂರ್ಣಗೊಳಿಸಲು ನನಗೆ ಅವಕಾಶ ನೀಡಲಿಲ್ಲ. ಈಗ ನಾನು ಹಲವು ಜವಾಬ್ದಾರಿಗಳಿಂದ ಮುಕ್ತಳಾಗಿದ್ದು, ನನ್ನ ಕನಸನ್ನು ನನಸು ಮಾಡುವಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಸದನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!