ಬೆಂಗಳೂರು: ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಲಕ್ಷಾಂತರ ರೂ. ದೋಚುತ್ತಿರುವ ಕುಕೃತ್ಯಗಳು ಮುಂದುವರಿದಿದ್ದು, ಇತ್ತೀಚೆಗೆ 77 ವರ್ಷದ ವೃದ್ಧರೊಬ್ಬರು ಕಂಪನಿ ಹೆಸರಿನಲ್ಲಿ ಬಂದ ಫೋನ್ ಸ್ವೀಕರಿಸಿ 89.50 ಲಕ್ಷ ರೂ.ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡ ವೃದ್ಧರು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ವಾಸಿಸುವ ರಮೇಶ್ (ಹೆಸರು ಬದಲಿಸಲಾಗಿದೆ) ಅವರಿಗೆ ಜನವರಿ 6 ರಂದು ಕರೆ ಮಾಡಿದ್ದ ಅಪರಿಚಿತನೊಬ್ಬ ತಾನು ಏರ್‌ಟೆಲ್ ತಾಂತ್ರಿಕ ವಿಭಾಗದ ಸಿಬ್ಬಂದಿ ನಿತೀಶ್‌ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ‘
ನಿಮ್ಮ ಆಧಾರ್ ಕಾರ್ಡ್ ಬಳಸಿ ಮುಂಬಯಿಯ ಕಂಪನಿಯೊಂದು ವೈಫೈ ಸಂಪರ್ಕ ಪಡೆದಿದೆ. ಹೀಗಾಗಿ, ಮುಂಬಯಿಯ ಅಂಧೇರಿ ಠಾಣೆಯಲ್ಲಿ ತಕ್ಷಣ ದೂರು ನೀಡಿ’ ಎಂದು ಸಲಹೆ ನೀಡಿದ್ದಾ ರೆ.




