ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟಿರುವ ಆನೆ ಮರಿಯೊಂದು ರಾಷ್ಟ್ರೀಯ ಹೆದ್ದಾರಿಗೆ ಬಂದು ವಾಹನಗಳ ನಡುವೆ ಒಡಾಟ ನಡೆಸಿ ವಾಹನ ಸವಾರರಿಗೆ ಆತಂಕ ಉಂಟು ಮಾಡಿದ ಘಟನೆ ಕರ್ನಾಟಕ ಕೇರಳ ನಡುವೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಕೇರಳದ ಕಟ್ಟಿಕುಲಂ ತಿರುನೆಲ್ಲಿ ಕಾಡಿನಿಂದ ತಾಯಿಯಿಂದ ಬೇರ್ಪಟ್ಟಿರುವ ಮರಿಯಾನೆ ರಸ್ತೆ ಬಂದಿದ್ದು, ಆನೆ ಮನೆಯ ತುಂಟಾಟವನ್ನು ಸಹಿಸಲಾಗುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಾಹನ ಸಂಚಾರ ಮಾಡುತ್ತಿದ್ದು, ಇದರ ನಡುವೆ ಆನೆ ಮರಿ ಓಡಾಟ ಮಾಡುತ್ತಿರುವುದು ವಿಶೇಷವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರಿಯಾನೆಯನ್ನು ರಕ್ಷಿಸಿ ತಾಯಿ ಬಳಿ ಬಿಡಬೇಕೆಂದು ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ :ಸ್ವಾಮಿ ಬಳೇಪೇಟೆ