ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.
ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಂತ್ಯಕ್ಕೆ ತನ್ನ ದ್ವಿತೀಯ ಸರದಿಯಲ್ಲಿ 3 ವಿಕೆಟ್ ಗೆ 72 ರನ್ ಗಳಿಸಿದ್ದು, ಕೊನೆಯ ದಿನ ಪಂದ್ಯ ಗೆಲ್ಲಲು ಇನ್ನು 536 ರನ್ ಗಳನ್ನು ಗಳಿಸಬೇಕಿದೆ. ಭಾರತ ಪಂದ್ಯ ಗೆಲ್ಲಲು ಕೊನೆಯ ದಿನ 7 ವಿಕೆಟ್ ಗಳನ್ನು ಪಡೆಯಬೇಕಿದೆ.
180 ರನ್ ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ತನ್ನ ದ್ವಿತೀಯ ಸರದಿಯಲ್ಲಿ ಭಾರತ 6 ವಿಕೆಟ್ ಗೆ 427 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಸರದಿಯಲ್ಲಿಯೂ ಭಾರತದ ಪರವಾಗಿ ನಾಯಕ ಶುಭಮಾನ್ ಗಿಲ್ ಶತಕ ಸಂಪಾದನೆ ಮಾಡಿದರು. ಅವರು 161 ರನ್ ಗಳಿಸಿದರು. 162 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ 8 ಸಿಕ್ಸರ್ ಸಿಡಿಸಿದರು. ಪಂತ್ 65 ಹಾಗೂ ರವೀಂದ್ರ ಜಡೆಜಾ 69 ರನ್ ಗಳಿಸಿದರು. ಪಂದ್ಯ ಗೆಲ್ಲುವ ಇಚ್ಛೆಯಿಂದ ಭಾರತ ಆಕ್ರಮಣಕಾರಿ ಆಟಕ್ಕೆ ಇಳಿದಿದ್ದು ಕಂಡು ಬಂತ್ತು. ಶುಭಮಾನ್ ಅವರ ವೇಗದ ಶತಕವೇ ಇದಕ್ಕೆ ಸಾಕ್ಷಿ.