ಹುಬ್ಬಳ್ಳಿ:ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ, ಬಿಜೆಪಿ ಕಾರ್ಯಕರ್ತೆಯನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವ ಆರೋಪಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅರೆಸ್ಟ್ ಮಾಡುವ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆಂತೆ.
ಹೌದು ..ದೂರು ನೀಡಿದ ಅನ್ವಯದಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಯನ್ನು ಬಂಧನ ಮಾಡುವ ವೇಳೆ ಹೈಡ್ರಾಮಾ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದಾಳಂತೆ.ತಾನೆ ಬಟ್ಟೆ ಬಿಚ್ಚಿಕೊಂಡು ತಾನು ಅಮಾಯಕ ಅಂತ ಬಿಂಬಿಸುವ ಪ್ರಯತ್ನ ಮಾಡಿದ್ದಾಳೆಂತೆ.
ಅಷ್ಟೇ ಅಲ್ದೆ ಸುಜಾತಾ ಮೊಸ್ಟ್ ಕ್ರಿಮಿನಲ್ ಬ್ಯಾಗ್ರೌಂಡ್ 9 ಕೇಸ್ ಹಿಸ್ಟರಿ ಇರುವ ಲೇಡಿ, ಪೊಲೀಸರು ಬಂಧನದ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾಳಂತೆ, ಹಲವಾರು ಕೇಸ್‌ಗಳು ಸುಜಾತಾ ಮೇಲಿವೆ, ಕೊಲೆ ಯತ್ನ, ಗಾಂಜಾ, ಹನಿ ಟ್ರ್ಯಾಪ್ ಹೀಗೆ ಬೇರೆ ಬೇರೆ ಕೇಸ್‌ಗಳು ಸುಜಾತನ ಮೇಲಿವೆ ಅಂತೆ, ಬಟ್ಟೆ ಬಿಚ್ಚಿದಾಗ ಪೊಲೀಸರು ದೇಹ ಮುಚ್ಚಲು ಎಷ್ಟೇ ಪ್ರಯತ್ನ ಪಟ್ಟರು ಬಟ್ಟೆ ತಾನೆ ತೆಗೆದು ಪೊಲೀಸರ ಮೇಲೆ ಆರೋಪ ಹೊರೆಸುವ ಪ್ರಯತ್ನ ಮಾಡಿದ್ದಾಳೆಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ.
ವರದಿ:ಸುಧೀರ್ ಕುಲಕರ್ಣಿ




