ಹುಬ್ಬಳ್ಳಿ:– ಗಾಳಿಪಟದ ಹುಚ್ಚು ಬಾಲಕನೊಬ್ಬನ ಜೀವಕ್ಕೆ ಕುತ್ತು ತಂದಿದೆ. ವಿದ್ಯುತ್ ಕೇಬಲ್ ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋಗಿ ಶಾರ್ಟ್ ಸರ್ಕ್ಯೂಟ್ ನಿಂದ ಬಾಲಕ ಸಂಪೂರ್ಣ ಅಸ್ವಸ್ಥಗೊಂಡಿದ್ದಾನೆ.

ಹುಬ್ಬಳ್ಳಿಯ ಸಂತೋಷ ನಗರದಲ್ಲಿ ಘಟನೆ ನಡೆದಿದ್ದು, ರಾಹುಲ್ ಬದ್ದಿ ಎಂಬುವ ಬಾಲಕನೇ ಅಪಘಾತಕ್ಕೆ ಒಳಗಾಗಿರುವ ಬಾಲಕನಾಗಿದ್ದಾನೆ. ವಿದ್ಯುತ್ ಕೇಬಲ್ ಗೆ ಗಾಳಿಪಟ ಸಿಲುಕಿಕೊಂಡಿದ್ದು, ಕಬ್ಬಿನಿಂದ ವಿದ್ಯುತ್ ಕೇಬಲ್ ಗೆ ಹೊಡೆದಿದ್ದು, ಇದರಿಂದ ಬಾಲಕನಿಗೆ ವಿದ್ಯುತ್ ತಗುಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ಇನ್ನೂ ದೇಹದ 90% ಭಾಗ ಸುಟ್ಟಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಭಾರತ ವೈಭವಕ್ಕೆ ಮಾಹಿತಿ ನೀಡಿದ್ದಾರೆ.
ವರದಿ:- ಸುಧೀರ್ ಕುಲಕರ್ಣಿ




