ಮುದಗಲ್ಲ :-ಪುರಸಭೆಯಲ್ಲಿ ಬ್ರೋಕರ್ ಹಾವಳಿ- ಇವರ ಮೂಲಕ ಇಲ್ಲಾಂದ್ರೆ ನಿಮ್ಮ ಕೆಲಸ ಆಗಲ್ಲ : ಬಸವರಾಜ ಬಂಕದಮನೆ (ದಲಿತ ಮುಖಂಡ)
ಮುದಗಲ್ಲ :- ಖಾತ ನಕಲು ಮುಟೇಶನ ಸೇರಿದಂತೆ ಯಾವುದೇ ಕೆಲಸ ನಡೆಯಬೇಕಾದರೂ ಕೂಡ ನೇರವಾಗಿ ಸಾರ್ವಜನಿಕ ಹೋದರೆ ಕೆಲಸಗಳು ಆಗುತ್ತಿಲ್ಲ ಬದಲಾಗಿ ಬ್ರೋಕರ್ ಮೂಲಕ ಸಮೇತ ದಾಖಲೆ ಸಲ್ಲಿಸಿದರೆ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು ಅದಕ್ಕೆ ಪೂರಕವಾಗಿ ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಹಾಗೂ ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕ ಅಧ್ಯಕ್ಷ ರಾದ ಬಸವರಾಜ ಬಂಕದಮನೆ ಆರೋಪ ಮಾಡಿದ್ದಾರೆ..
ಅಸಲಿಗೆ ಮುದಗಲ್ಲ ಪುರಸಭೆ ಕೂಡ ಅಧಿಕಾರ ವರ್ಗ ಮಾತ್ರ ಸಾರ್ವಜನಿಕರ ಕಿಸೆ ನೋಡಿಯೆ ಕೆಲಸ ಮಾಡುತ್ತಿದ್ದಾರೆಂಬ ದಲಿತ ಸಂಘರ್ಷ ಸಮಿತಿ ಆರೋಪ
ಸದ್ದು ಮಾಡುತ್ತಿದೆ.ನೇರವಾಗಿ ಹಣ ಕೇಳದಿದ್ದರೂ ಬ್ರೋಕರ್ ಮುಖೇನ ಫೈಲ್ ಸಲ್ಲಿಸುವಾಗ ಫೀಸ್ ಜತೆಗೆ ಲಂಚದ ಹಣವೂ ಕೂಡಿರುತ್ತದೆಂಬ ಮಾತು ಚಾಲ್ತಿಯಲ್ಲಿದೆ ಎಂದು ಆರೋಪ ಮಾಡಿದ್ದಾರೆ
ಅತಿ ಹೆಚ್ಚು ಸಾರ್ವಜನಿಕ ಸಂಪರ್ಕದ ಪುರಸಭೆ ಯು ಕಚೇರಿಗೆ ನೂರೆಂಟು ಬಾರಿ ಅಲೆದರೂ ಸಾರ್ವಜನಿಕರಿಗೆ ದಾಖಲೆ ಕೆಲಸ ಆಗಲ್ಲ. ನೇರವಾಗಿ ಸಂಪರ್ಕಿಸುವ ಸಾರ್ವಜನಿಕರಿಗೆ ಕಚೇರಿ ಅಲೆಯುವ ಶಿಕ್ಷೆ ಸಿಗುತ್ತಿದ್ದು, ಬ್ರೋಕರ್ ಸಹಕಾರ ಪಡೆಯುವ ಅನಿವಾರ‍್ಯ ಎದುರಾಗಿದೆ.ಅರ್ಜಿ, ಕಡತ, ದಾಖಲೆ ಕಣ್ಮರೆ ಪ್ರಕರಣ ಹೆಚ್ಚಾಗುತ್ತಿದ್ದು ಸಾರ್ವಜನಿಕರ ಗೋಳು ಹೇಳತೀರದಾಗಿದೆ. ದುಡ್ಡು, ಬ್ರೋಕರ್ ಇಲ್ಲದೇ ದಾಖಲೆ ಕೆಲಸ ಕಷ್ಟ ಎಂಬಂತಹ ಸನ್ನಿವೇಶ ಸೃಷ್ಟಿ ಆದಂತಿದೆ. ಹಣಕ್ಕೆ ನಿಯಮ ಬಾಹಿರ ಕೆಲಸ ಕ್ಷಣಾರ್ಧದಲ್ಲಿ ಆಗುತ್ತದೆ ಎಂಬ ದೂರಿದೆ. ಕಚೇರಿ ನಿರ್ವಹಣೆ ದೋಷದಿಂದಾಗಿ ಪುರಸಭೆ ಗೌರವ ಮಣ್ಣು ಪಾಲಾಗಿದೆ
ಖಾತೆ ಬದಲಾವಣೆ, ಹಕ್ಕುರೂಢಿ, ಮುಟ್ಯೇಷನ್ ,ಖಾತ ನಕಲ್ ವಿರುದ್ಧವಾಗಿ ಕಾರ‍್ಯನಿರ್ವಹಿಸಿದ ಪ್ರಕರಣ ಹಲವು ಇವೆ. ನಿಯಮ ಹೇಳಿ ಬಹುದಿನ ಅರ್ಜಿ ಬಾಕಿ ಉಳಿಸಿದ ನಂತರ ಹಣ ಪಡೆದು ಅರ್ಜಿ ಬಗೆಹರಿಸುವುದು ಮಾಮೂಲಿಯಂತಿದೆ.
ನಿಯಮಬಾಹಿರ ಚಟುವಟಿಕೆ ಹೆಚ್ಚಾಗಿರುವ ಹಾಗೂ ದುಡ್ಡು ಪಡೆದು ದಾಖಲೆ ಕೊಡ ುವ ವ್ಯವಹಾರದ ಕಚೇರಿ ಆಗಿ ಪರಿವರ್ತನೆ ಆದಂತಿದ್ದು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಹಾಗೂ ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕದ ಅಧ್ಯಕ್ಷರು ಗಂಭೀರ ಆರೋಪ ಹಾಗೂ ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ.ಎಂದ ಪುರಸಭೆ ವಿರುದ್ಧ ಆರೋಪ ಮಾಡಿದ್ದಾರೆ…
ಕಚೇರಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದು ಸಮಯಕ್ಕೆ ಕೆಲಸವೂ ಆಗುತ್ತಿಲ್ಲ. ಲಂಚ, ಬ್ರೋಕರ್ ಹಾವಳಿ ತೊಂದರೆ ಕುರಿತು ಸಾರ್ವಜನಿಕರ ದೂರಿಗೆ ಆಡಳಿತದಿಂದ ಪರಿಹಾರ ಕ್ರಮ ಮರೀಚಿಕೆ ಆಗಿದೆ. ಕಚೇರಿ ಸಂಪೂರ್ಣ ಬ್ರೋಕರ್ ಮಯವಾಗಿದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.
ವರದಿ:- ಮಂಜುನಾಥ ಕುಂಬಾರ