Ad imageAd image

ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಸಹೋದರ ಸಾವು 

Bharath Vaibhav
ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಸಹೋದರ ಸಾವು 
WhatsApp Group Join Now
Telegram Group Join Now

ವಿಜಯಪುರ: ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬುಧವಾರ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ಸಾವಿಗೀಡಾಗಿದ್ದಾರೆ.

ಶ್ರೀಕಾಂತ ದುಂಡಪ್ಪ ವಿಜಾಪುರ (29), ರಾಜಕುಮಾರ ದುಂಡಪ್ಪ ವಿಜಾಪುರ (31) ಸಾವಿಗೀಡಾದ ದುರ್ದೈವಿಗಳು.ತೋಟದಲ್ಲಿ ಟಿಸಿಯಿಂದ ಕೊಳವೆಬಾವಿಗೆ ವಿದ್ಯುತ್ ಪೂರೈಸಲು ಎಳೆಯಲಾಗಿದ್ದ ತಂತಿ ತುಂಡಾಗಿ ದ್ರಾಕ್ಷಿ ಪಡದ ಕಬ್ಬಿಣದ ಆಯಂಗಲ್ ಗೆ ವಿದ್ಯುತ್ ಪ್ರವಹಿಸಿದೆ.

ವಿದ್ಯುತ್ ತಗುಲಿ ಶ್ರೀಕಾಂತ ಕೆಳಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಅಣ್ಣ ರಾಜಕುಮಾರ ತಮ್ಮನನ್ನು ರಕ್ಷಿಸಲು ಹೋದಾಗ ವಿದ್ಯುತ್ ತಗುಲಿ ಸಹೋದದರಿಬ್ಬರು ಸ್ಥಳದಲ್ಲೆ ಸಾವಿಗಿಡಾಗಿದ್ದಾರೆ ಎಂದು ತಿಕೋಟಾ ಪೋಲಿಸರು ಮಾಹಿತಿ ನೀಡಿದ್ದಾರೆ.

ಬಾಬಾನಗರ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದರೆ. ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!