Ad imageAd image

30 ವರ್ಷಗಳ ಹಿಂದೆ 500 ರೂ. ಲಂಚ ಪಡೆದ ಪ್ರಕರಣ : 10 ವರ್ಷಗಳ ನಂತರ ಶಿಕ್ಷೆ

Bharath Vaibhav
30 ವರ್ಷಗಳ ಹಿಂದೆ 500 ರೂ. ಲಂಚ ಪಡೆದ ಪ್ರಕರಣ : 10 ವರ್ಷಗಳ ನಂತರ ಶಿಕ್ಷೆ
WhatsApp Group Join Now
Telegram Group Join Now

ಬೆಳಗಾವಿ: 30 ವರ್ಷಗಳ ಹಿಂದೆ 500 ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿವೃತ್ತಿಯಾಗಿ 10 ವರ್ಷದ ಬಳಿಕ ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ ವಿಧಿಸಿರುವಂತಹ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಇನ್ನೊಂದು ವಿಚಿತ್ರ ವಿಚಾರವೆಂದರೆ ದೂರುದಾರರು ಕೂಡಾ ಮೃತಪಟ್ಟು 5 ವರ್ಷಗಳೇ ಕಳೆದಿವೆ.

ನಾಗೇಶ್ ಶಿವಂಗೇಕರ್ ಜೈಲು ಶಿಕ್ಷೆಗೆ ಒಳಗಾದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ನಾಗೇಶ್ ಶಿವಂಗೇಕರ್​ 30 ವರ್ಷ ಹಿಂದೆ ಪಹಣಿ ಪತ್ರದಲ್ಲಿ ವಾಟ್ನಿ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶಿವಂಗೇಕರ್ 500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ಘಟನೆ ಸಂಬಂಧ 2006ರಲ್ಲಿ ಶಿವಂಗೇಕರ್ ಅವರಿಗೆ ಒಂದು ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ‌ಮೋರೆ ಹೋಗಿದ್ದ ನಾಗೇಶ್ ಶಿವಂಗೇಕರ್​ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ‌ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಇಂದು ಸುಪ್ರೀಂ ಕೋರ್ಟ್ ಲೋಕಾಯುಕ್ತ ಪರ ಪರ ತೀರ್ಪು ಪ್ರಕಟಿಸಿದೆ. ಸದ್ಯ ಶಿವಂಗೇಕರ್ ನಿವೃತ್ತಿಯಾಗಿ 10 ವರ್ಷಗಳ ಬಳಿಕ ಈಗ ಜೈಲುಪಾಲಾಗಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿಗೆ ನಾಗೇಶ್ ಶಿವಂಗೇಕರ್​​ನ್ನು ಲೋಕಾಯುಕ್ತ ಪೊಲೀಸರು ರವಾನಿಸಿದ್ದಾ ರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!