Ad imageAd image

ರಾಯಾಪುರ ಗ್ರಾಮದಲ್ಲಿ ಯುವಕನೊರ್ವ ನೇಣಿಗೆ ಶರಣು

Bharath Vaibhav
ರಾಯಾಪುರ ಗ್ರಾಮದಲ್ಲಿ ಯುವಕನೊರ್ವ ನೇಣಿಗೆ ಶರಣು
WhatsApp Group Join Now
Telegram Group Join Now

ಮೊಳಕಾಲ್ಮುರು:ಯುವಕನೊರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಪ್ರಕರಣ ರಾಯಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಕಾಕಾಪಾಲಯ್ಯನಹಟ್ಟಿಯಲ್ಲಿ ವಾಸವಿದ್ದ ಯುವಕ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ನೇಣು ಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮೃತ ದೇಹ ಕೊಳೆಯುವ ಹಂತ ತಲುಪಿದೆ,ಮೃತ ದೇಹದಿಂದ ವಿಪರೀತ ವಾಸನೆ ಬಂದಾಗ ಸ್ಥಳೀಯರು ಮನೆ ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಕಂಡಿದೆ, ಕೂಡಲೇ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ, ಘಟನಾ ಸ್ಥಳಕ್ಕೆ ಕ್ರೈಂ ಪಿಎಸ್ ಐ ಈರೇಶ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತ ಯುವಕನನ್ನು 26ವರ್ಷದ ಪ್ರದೀಪ್ ಎನ್ನಲಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ.ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:-ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!