ಬೆಳಗಾವಿ: ಡ್ಯೂಟಿ ಬದಲಾವಣೆ ಮಾಡಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆ ಹೈಡ್ರಾಮಾ ನಡೆಸಿದ ಘಟನೆ ಬೆಳಗಾವಿ ನಗರದ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಾನ್ಸ್ಟೇಬಲ್ ಮುದುಕಪ್ಪ ಉದಗಟ್ಟೆ ಹೈಡ್ರಾಮಾ ಮಾಡಿದವರು. ಎರಡು ದಿನ ರಜೆ ಹೋಗಿ ಬಂದಿದ್ದ ಅವರಿಗೆ ಡ್ಯೂಟಿ ಬದಲಿಸಲಾಗಿತ್ತು.
ಸೂಚಿದ ಜಾಗಕ್ಕೆ ಹೋಗಬೇಕೆಂದು ಪಿಎಸ್‌ಐ ಸೂಚನೆ ನೀಡಿದ್ದರು. ಆದರೆ ಈ ವೇಳೆ ವಿಷ ಸೇವಿಸುತ್ತೇನೆ ಎಂದು ಮುದುಕಪ್ಪ ಹೈಡ್ರಾಮಾ ಮಾಡಿದ್ದು, ಠಾಣೆಯಲ್ಲಿ ಬಿದ್ದು ಹೊರಳಾಡಿದ್ದಾನೆ.
ಕೂಡಲೇ ಮುದುಕಪ್ಪನನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಆರೋಗ್ಯ ತಪಾಸಣೆ ಮಾಡಿದಾಗ ಯಾವುದೇ ವಿಷ ಸೇವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಮೇಲಾಧಿಕಾರಿಗಳು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಇತ್ತ ಪಿಸಿ ನಡೆಯಿಂದಾಗಿ ಪಿಐ ಡಿ.ಕೆ. ಪಾಟೀಲ್ ಅವರಿಗೆ ಲೋ ಬಿಪಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಉದ್ಯಮಭಾಗ ಠಾಣೆಗೆ ಎಸಿಪಿ ಶೇಖರಪ್ಪ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹೈಡ್ರಾಮಾದ ಬಗ್ಗೆ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ.