Ad imageAd image

ಪತ್ನಿಯಿಂದ ಬೇಸತ್ತ ಪತಿಗೆ ನ್ಯಾಯಾಲಯ ವಿಚ್ಛೇದನಕ್ಕೆ ಅವಕಾಶ

Bharath Vaibhav
ಪತ್ನಿಯಿಂದ ಬೇಸತ್ತ ಪತಿಗೆ ನ್ಯಾಯಾಲಯ ವಿಚ್ಛೇದನಕ್ಕೆ ಅವಕಾಶ
WhatsApp Group Join Now
Telegram Group Join Now

ಇಂದೋರ್: ಇಂದೋರ್​ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯಿಂದ ಬೇಸತ್ತ ಪತಿಗೆ ನ್ಯಾಯಾಲಯ ವಿಚ್ಛೇದನಕ್ಕೆ ಅವಕಾಶ ನೀಡಿದೆ. ಆದರೆ ಇದನ್ನು ಪತ್ನಿ ಮಧ್ಯ ಪ್ರದೇಶ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನೇ ಹೈಕೋರ್ಟ್‌ ಎತ್ತಿ ಹಿಡಿಯಿತು.

ಈ ಪ್ರಕರಣದಲ್ಲಿ ಪತಿ, ಹೆಂಡತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದರ ಜೊತೆಗೆ ಇತರ ಪುರುಷರೊಂದಿಗೆ ಅಶ್ಲೀಲವಾಗಿ ಚಾಟ್​ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಪತ್ನಿಯೂ, ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರ ಹಾಗೂ 25 ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹೈಕೋರ್ಟ್​ನ ನ್ಯಾಯಮೂರ್ತಿ ವಿವೇಕ್​ ರುಸಿಯಾ ಹಾಗೂ ಗಜೇಂದ್ರ ಸಿಂಗ್​ ಅವರಿದ್ದ ಪೀಠ, ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ಪತಿ, ತಮ್ಮ ಪತ್ನಿ ಇತರ ಪುರುಷರಿಗೆ ಕಳುಹಿಸಿದ ಅಶ್ಲೀಲ ವಾಟ್ಸ್‌ಆ್ಯಪ್​ ಚಾಟ್​ಗಳ ಪುರಾವೆ ಇದೆ ಎಂದು ತಿಳಿಸಿದರು. ಪತಿ ಮಂಡಿಸಿದ ಸಾಕ್ಷ್ಯಗಳನ್ನು ಪರಿಗಣಿಸಿದ ಹೈಕೋರ್ಟ್​, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. “ಯಾವುದೇ ಪತಿ ಅಥವಾ ಪತ್ನಿ ಯಾವುದೇ ವ್ಯಕ್ತಿಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸುವ ಮನೋಭಾವವನ್ನು ಸಹಿಸಲು ಸಾಧ್ಯವಿಲ್ಲ. ಹೀಗೆ ಮಾಡುವುದು ಸಂಗಾತಿಗೆ ಮಾಡುವ ಮಾನಸಿಕ ಕ್ರೌರ್ಯ” ಎಂದು ಹೇಳಿತು.

ಪತ್ನಿಯ ವಾದವೇನು?: ಈ ಆರೋಪಗಳ ಕುರಿತು ಪ್ರತಿವಾದಿಸಿರುವ ಪತ್ನಿ, ಪತಿ ತನ್ನ ಮೊಬೈಲ್​ ಫೋನ್​ ಹ್ಯಾಕ್​ ಮಾಡಿ, ಆ ಇಬ್ಬರು ಪುರುಷರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಮಾತ್ರವಲ್ಲದೆ ತನಗೆ ಹಿಂಸೆ ನೀಡಿದ್ದು, 25 ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!