Ad imageAd image

ಕ್ರಿಕೆಟ್ ಬಾಲ್ ವಿಚಾರವಾಗಿ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆಗೈದ ಕಿರಾತಕ 

Bharath Vaibhav
ಕ್ರಿಕೆಟ್ ಬಾಲ್ ವಿಚಾರವಾಗಿ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆಗೈದ ಕಿರಾತಕ 
WhatsApp Group Join Now
Telegram Group Join Now

ಬಾಗಲಕೋಟೆ : ಕ್ರಿಕೆಟ್ ಆಟದ ವಿಚಾರವಾಗಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನಿಗೆ ಯುವಕನೊಬ್ಬ ಇರಿದು ಹಲ್ಲೆಗೈದಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.ಹಲ್ಲೆಗೆ ಒಳಗಾದ ಶಿಕ್ಷಕರನ್ನು ರಾಮಪ್ಪ ಪೂಜಾರಿ ಎಂದು ತಿಳಿದುಬಂದಿದೆ.

ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಶಿಕ್ಷಕನಿಗೆ ಯುವಕನೊಬ್ಬ ಒಡೆದ ಬಿಯರ್ ಬಾಟಲ್ ನಿಂದ ಇರದಿದ್ದಾನೆ. ಸಾವಳಗಿ ಗ್ರಾಮದಲ್ಲಿ ರಾಮಪ್ಪ ಪೂಜಾರಿ ಎನ್ನುವ ಶಿಕ್ಷಕನಿಗೆ ಇದೀಗ ಗಂಭೀರವಾದ ಗಾಯಗಳಾಗಿವೆ.

ರಾಮಪ್ಪ ಪೂಜಾರಿ ಎನ್ನುವ ಶಿಕ್ಷಕನಿಗೆ ಯುವಕ ಪವನ್ ಜಾಧವ್ ಬಾಟಲ್ ನಿಂದ ಇರಿದಿದ್ದಾನೆ. ರಾಮಪ್ಪ ಪೂಜಾರಿ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಿಕ್ಷಕರಾಗಿದ್ದಾರೆ.

ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕನ ಮನೆಯಲ್ಲಿ ಅತ್ತಿತ್ತು. ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಯುವಕ ಕೇಳಿದ್ದಾನೆ. ಇಲ್ಲಿ ಬಾಲ್ ಬಂದಿಲ್ಲ ಎಂದು ರಾಮಪ್ಪ ಹೇಳಿದ್ದಾರೆ. ಈ ವೇಳೆ ಶಿಕ್ಷಕನ ಜೊತೆಗೆ ಯುವಕ ಕಿರಿಕ್ ಮಾಡಿದ್ದಾನೆ.

ನಂತರ ಶಾಲೆಗೆ ಹೋಗಿ ಬಾಟಲ್ ನಿಂದ ಯುವಕ ಶಿಕ್ಷಕನಿಗೆ ಇರಿದಿದ್ದಾನೆ. ಶಿಕ್ಷಕ ರಾಮಪ್ಪ ಸಾವಳಗಿ ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಳಗೆ ಠಾಣೆ ಪೋಲಿಸರು ಹಲ್ಲೆ ಮಾಡಿದ ಯುವಕರನ್ನು ಅರೆಸ್ಟ್ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!