Ad imageAd image

ಗ್ರಾಮ ಸ್ವಚ್ಛತೆಗಾಗಿ ತಿಂಗಳಲ್ಲಿ ಒಂದು ದಿನ ಮೀಸಲು: ಪಿಡಿಒ

Bharath Vaibhav
ಗ್ರಾಮ ಸ್ವಚ್ಛತೆಗಾಗಿ ತಿಂಗಳಲ್ಲಿ ಒಂದು ದಿನ ಮೀಸಲು:  ಪಿಡಿಒ
WhatsApp Group Join Now
Telegram Group Join Now

ಐಗಳಿ:ನಮ್ಮ ಗ್ರಾಮವು ಸ್ವಚ್ಛ, ಹಸಿರು ಹಾಗೂ ಆರೋಗ್ಯವಂತ ಸಮಾಜವಾಗಿ ಬೆಳೆದರೆ ಮಾತ್ರ ಸುವ್ಯವಸ್ಥಿತ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಹಾಗೂ ಗ್ರಾಮೀಣ ಸಮುದಾಯದಲ್ಲಿ ಶುದ್ಧತೆಯ ಮಹತ್ವವನ್ನು ಸಾರಲು ಹಮ್ಮಿಕೊಂಡಿದ್ದ ಗ್ರಾಮ ಸ್ವಚ್ಛತಾ ಕಾರ್ಯಕ್ರಮವು ಉತ್ತಮ ಪ್ರತಿಕ್ರಿಯೆ ಪಡೆದಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಠಕ್ ಅವರು ಹೇಳಿದರು.

ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಜಯಂತಿ ನಿಮಿತ್ಯವಾಗಿ ಶನಿವಾರದಂದು ಐಗಳಿ ಗ್ರಾಮದ ಪ್ರಮುಖ ಸ್ಥಳಗಳನ್ನು ಸ್ವಚ್ಛತೆಯ ಮಾಡುವುದರೊಂದಿಗೆ ಬಾಬು ಜಗಜೀವನ ಅವರ ಜಯಂತಿ ಉತ್ಸವವನ್ನು ಆಚರಣೆ ಮಾಡಿರುವುದು ಇದೊಂದು ಮಾದರಿಯ ಕಾರ್ಯಕ್ರಮವಾಗಿದೆ.

ಇಂದಿನಿಂದ ಪ್ರತಿ ತಿಂಗಳು ಮೂರನೇಯ ಶನಿವಾರದಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ವ ಇಚ್ಛೆಯಿಂದ ಗ್ರಾಮವನ್ನು ಸ್ವಚ್ಛತೆ ಹಾಗೂ ಸುಂದರವಾಗಿಸಲು ಪಣ ತೊಟ್ಟಿದ್ದೇವೆ ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶಕುಂತಲಾ ಪಾಟೀಲ್ ಅವರು ತಿಳಿಸಿದರು.
ಈ ತರಹ ಕಾರ್ಯಕ್ರಮಗಳು ಗ್ರಾಮಸ್ಥರಲ್ಲಿ ಪ್ರಜ್ಞೆ ಜಾಗೃತಗೊಳಿಸುತ್ತವೆ ಹಾಗೂ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ.
ನಿಮ್ಮ ಈ ಶ್ರಮ ಹಾಗೂ ಶ್ರದ್ಧೆಗಿಂತ ದೊಡ್ಡ ಗೌರವವೇ ಇಲ್ಲ. ಗ್ರಾಮೀಣ ಪ್ರಜಾಪ್ರಭುತ್ವದ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಗ್ರಾಮೀಣ ಅಭಿವೃದ್ಧಿಗೆ ಈಡಾಗುವ ಪ್ರತಿ ಹೆಜ್ಜೆ ಎಲ್ಲರಿಗೂ ಮಾದರಿಯಾಗಲಿ ಎಂದು ಇವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಸಂಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಪ್ಪ ಸಾಬ್ ಪಾಟೀಲ್ ಧರೆಪ್ಪ ಮಾಳಿ ಹನುಮಂತ ತೆಲಸಂಗ ಗುತ್ತಿಗೆದಾರರು ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ್ ಬಿಜ್ಜರಗಿ ಸೋಮಣ್ಣ ಭಂಡಬಟ್ಟಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ ಗಿರೀಶ್ ಅವಟಿ ಕ್ಲಾಕ್ ಅಪ್ಪು ಮದಬಾವಿ ಕರ ವಸಲಿಗಾರ ಮಾಳಪ್ಪ ಸತ್ತಿಗೇರಿ ಗ್ರಂಥಾಲಯ ಮೇಲ್ವಿಚಾರಕರು ಮಲ್ಲಿಕಾರ್ಜುನ ನಾವಿ ಸಿಬ್ಬಂದಿಗಳಾದ ಸಂತೋಷ ಮುಚ್ಚಂಡಿ ಬಸವರಾಜ್ ಬಾಡಿಗೆ ನಾಗೇಶ್ ಮಾಳಿ ಸೇರಿದಂತೆ ಇತರರು ಭಾಗಿಯಾಗಿದ್ದರು.

WhatsApp Group Join Now
Telegram Group Join Now
Share This Article
error: Content is protected !!