ಬೆಂಗಳೂರು : ಒಳ ಮೀಸಲಾತಿ ಮಸೂದೆ ಅಂಗೀಕರಸಿ, ಅನುಮೋದನೆ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ, ಅಬಕಾರಿ ಸಚಿವರಾದ ತಿಮ್ಮಾಪುರ, ಶಾಸಕರು ಹಾಗೂ ಸಮುದಾಯ ಮುಖಂಡರ ನಿಯೋಗವು ಇಂದು ಲೋಕ ಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಂಗೀಕರಿಸಿದ ಒಳ ಮೀಸಲಾತಿ ಮಸೂದೆಗೆ ನಿಮ್ಮಿಂದ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ನಾವು, ಸಚಿವರು, ಶಾಸಕರು, ಎಂಎಲ್‌ಸಿಗಳು ಮತ್ತು ಹಿರಿಯ ನಾಯಕರು ಗೌರವದಿಂದ ವಿನಂತಿಸುತ್ತೇವೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಬೆಂಬಲದೊಂದಿಗೆ ಎರಡೂ ಸದನಗಳು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ 101 ಒಳ ಸಮುದಾಯಗಳಲ್ಲಿ ಮೀಸಲಾತಿ ಕಲ್ಪಿಸಲು ಈ ಮಸೂದೆ ಸಹಾಯವಾಗಲಿದ್ದು, ಮಸೂದೆಗೆ ಆದಷ್ಟು ಬೇಗ ಒಪ್ಪಿಗೆ ನೀಡಬೇಕೆಂದು ಪತ್ರದ ಮುಖೇನ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.




