Ad imageAd image

ಮುದಗಲ್ಲ ನಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆ

Bharath Vaibhav
ಮುದಗಲ್ಲ ನಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆ
WhatsApp Group Join Now
Telegram Group Join Now

ಮುದಗಲ್ಲ : -ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ‘ಈದ್ ಮಿಲಾದ್’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಭಕ್ತಿಯಿಂದ ಮುದಗಲ್ಲ ನಲ್ಲಿ ಆಚರಿಸಲಾಯಿತು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಡುತ್ತಾ, ಶಾಂತಿ, ಸೌಹಾರ್ದದ ಘೋಷಣೆ ಕೂಗುತ್ತಾ ಶಿಸ್ತು ಬದ್ಧವಾಗಿ ಮೆರವಣಿಗೆ ನಡೆಸಿದರು.

ಬ್ಯಾನರ್‌, ದೀಪಾಲಂಕಾರ: ಈದ್‌ ಮಿಲಾದ್‌ ಉಲ್‌ ನಬೀ ಅಂಗವಾಗಿ ಮಸೀದಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿ ಕಂಗೊಳಿಸಲಾಗಿದೆ. ಪ್ರಮುಖ ಬೀದಿಗಳನ್ನು ಬಂಟಿಂಗ್ಸ್‌ ಮತ್ತು ಬ್ಯಾನರ್‌ಗಳಿಂದ ಶೃಂಗರಿಸಲಾಗಿದೆ.


ಸಮಾಜದ ಯುವಕರು ತಮ್ಮ ತಮ್ಮ ವಾಹನಗಳಿಗೆ ಹಸಿರು ಬಣ್ಣದ ಧ್ವಜಗಳಿಂದ ಶೃಂಗಾರ ಮಾಡಿಕೊಂಡಿದ್ದು ಕಂಡು ಬಂದಿತ್ತು.

ವಿಶೇಷ ಎಂದರೆ ಗುಲಾಮೇ ಮುಸ್ತಫಾ ನವ ಜವಾನ್ ಕಮಿಟಿ
ವತಿಯಿಂದ ಮೆರವಣಿಗೆಯಲ್ಲಿ ಇಂದ ಮುಸ್ಲಿಂ ಬಂಧುಗಳಿಗೆ ಜುಸ್ ಹಾಗೂ ತಂಪು ಪಾನಿಯನ್ನು ನೀಡಲಾಯಿತು….

ಈ ಸಂದರ್ಭದಲ್ಲಿರಾಜಕೀಯ ಗಣ್ಯರು ಭಾಗಿ,ಮುಸ್ಲಿಮರು ಬಂಧುಗಳು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!