Ad imageAd image

ಹೆರಿಗೆ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ ವೈದ್ಯ : ಮಗು ಸಾವು

Bharath Vaibhav
ಹೆರಿಗೆ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ ವೈದ್ಯ : ಮಗು ಸಾವು
WhatsApp Group Join Now
Telegram Group Join Now

ದಾವಣಗೆರೆ : ವೈದ್ಯರ ನಿರ್ಲಕ್ಷತನ ಎಡವಟ್ಟಿನಿಂದ ಹಲವಾರು ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಅಂತದ್ದೇ ಮತ್ತೊಂದು ದುರಂತ ಸಂಭವಿಸಿದ್ದು ಹೆರಿಗೆ ಮಾಡುವ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ್ದರಿಂದ ಕಣ್ಣು ಬಿಡುವುದಕ್ಕೂ ಮುಂಚೆಯೇ ಮಗು ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಕೊಂಡಜ್ಜಿ ರಸ್ತೆಯ ನಿವಾಸಿ ಅರ್ಜುನ್ ಎಂಬುವರ ಪತ್ನಿ ಅಮೃತಾ ಅವರು ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್​ ಡೆಲಿವರಿ ಆಗದ ಹಿನ್ನೆಲೆ ಸಿಸರಿನ್ ಮಾಡಿ ಮಗು ತೆಗೆಯುವ ವೇಳೆ ಮಗುವಿನ ಮರ್ಮಾಂಗಕ್ಕೆ ವೈದ್ಯರಿಂದ ತೊಂದರೆ ಮಾಡಿದ್ದಾರೆ.

ಅಮೃತಾಳಿಗೆ ಸಿಸರಿನ್ ಮೂಲಕ ಮಗುವನ್ನು ಹೊರ ತೆಗೆಯಬೇಕು ಎಂದು ವೈದ್ಯರು ಸೂಚಿಸಿದ್ದರು. ಸಿಸರಿನ್ ಮಾಡಿ ಮಗು ತೆಗೆಯುವ ವೇಳೆ ವೈದ್ಯ ನಿಜಾಮುದ್ದೀನ್ ಮಗುವಿನ ಮರ್ಮಾಂಗವನ್ನು ಆಕಸ್ಮಿಕವಾಗಿ ಕೊಯ್ದಿದ್ದಾರೆ.

ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಬಾಪುಜಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.ಮಗುವಿನ ಸಾವಿಗೆ ವೈದ್ಯರು ಕಾರಣ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಗುವಿನ ಸಾವಿಗೆ ಕಾರಣವಾದ ವೈದ್ಯನನ್ನು ಅಮಾನತು ಮಾಡುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!