Ad imageAd image

ಹಿಂದೂ ಧರ್ಮದ ಅವಹೇಳನ : ದೇವಸ್ಥಾನದಲ್ಲಿ ರಾಹುಲ್ ಭಾವಚಿತ್ರದ ಡೋರ್ ಮ್ಯಾಟ್ 

Bharath Vaibhav
ಹಿಂದೂ ಧರ್ಮದ ಅವಹೇಳನ : ದೇವಸ್ಥಾನದಲ್ಲಿ ರಾಹುಲ್ ಭಾವಚಿತ್ರದ ಡೋರ್ ಮ್ಯಾಟ್ 
WhatsApp Group Join Now
Telegram Group Join Now

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜುಲೈ 1 ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ, ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಕೆಲವರು 24 ಗಂಟೆಗಳ ಕಾಲ ದ್ವೇಷದಲ್ಲಿಯೇ ಕಾಲ ಕಳೆಯುತ್ತಾರೆ ಎಂದು ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು.

ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ಸದನದಲ್ಲಿಯೇ ಬಲವಾಗಿ ವಿರೋಧಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಹಿಂಸಾವಾದಿಗಳು ಎಂದು ಹೇಳಿದ್ದು ಇಡೀ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್, ಬಿಜೆಪಿ ಸಮಸ್ತ ಹಿಂದೂ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ತಿರುಗೇಟು ನೀಡಿದ್ದರು.

ಇದರ ಮಧ್ಯೆ ಮಹಾರಾಷ್ಟ್ರದ ದೇವಾಲಯ ಒಂದರಲ್ಲಿ ರಾಹುಲ್ ಭಾವಚಿತ್ರವನ್ನು ಡೋರ್ ಮ್ಯಾಟ್ ಆಗಿ ಬಳಸಿರುವುದು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇದರಲ್ಲಿ ಹಿಂದೂ ಸಮುದಾಯವನ್ನು ಹಿಂಸಾವಾದಿಗಳೆಂದು ಹೇಳಲು ನಿಮಗೆಷ್ಟು ಧೈರ್ಯ ಎಂದು ಕೂಡ ಬರೆಯಲಾಗಿದೆ. ಇದಕ್ಕೆ ಈಗ ತರಹೇವಾರಿ ಕಾಮೆಂಟ್ ಗಳು ಹರಿದು ಬರುತ್ತಿವೆ.

ದೇವಾಲಯದ ಈ ಕಾರ್ಯಕ್ಕೆ ಹಲವರು ಮೆಚ್ಚಿಕೊಂಡಿದ್ದು, ಹಿಂದೂ ಸಮುದಾಯವನ್ನು ಹಿಂಸಾವಾದಿ ಎಂದು ಹೇಳಿದ ರಾಹುಲ್ ಗೆ ತಕ್ಕ ಪಾಠ ಎಂದಿದ್ದರೆ ಮತ್ತೆ ಕೆಲವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ.

ಅಲ್ಲದೆ ರಾಹುಲ್ ಗಾಂಧಿ ಸಮಸ್ತ ಹಿಂದೂ ಸಮಾಜ ಹಿಂಸಾವಾದಿಯಲ್ಲ. ಆದರೆ ಕೆಲವರು ಆ ಹೆಸರಿನಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದಿದ್ದರು. ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರ ಸರಸ್ವತಿ ಕೂಡಾ ರಾಹುಲ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

WhatsApp Group Join Now
Telegram Group Join Now
Share This Article
error: Content is protected !!