ಅಥಣಿ :-ಯಾವುದೇ ಆಸೆ ಆಮೀಶಕ್ಜೆ ಒಳಗಾಗದೆ ತಪ್ಪದೇ ಮತದಾನ ಮಾಡಿ ಶಿವಾನಂದ ಕಲ್ಲಾಪುರ. ಅಥಣಿ ಪಟ್ಟಣದ ಕಿತ್ತೂರು ಹೈ ಸ್ಕೂಲ್ ವಾನರೇಬಲ್ ಮತಗಟ್ಟೆ ವ್ಯಾಪ್ತಿಯಲ್ಲಿ, ಅಧ್ಯಕ್ಷರು ಸ್ವೀಪ್ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಶಿವಾನಂದ ಕಲ್ಲಾಪುರ ತಾಲೂಕು ಪಂಚಾಯತ ಅಥಣಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಅಥಣಿ ನಾಗಣ್ಣ ಪರೀಟ್, ಅವರ ಅಧ್ಯಕ್ಷೆತೆಯಲ್ಲಿ ಸೂಕ್ಷ್ಮ ಮತಗಟ್ಟೆ ಹಾಗೂ ಕಡಿಮೆ ಮತದಾನ ಹೊಂದಿರುವ ವಾರ್ಡುಗಳಲ್ಲಿ, ಲಿಡ್ಕರ್ ಕಾಲೋನಿ, ಮಮ್ಮಾದೇವಿ ಗುಡಿ ಓಣಿಗಳಲ್ಲಿ ಮನೆ ಮನೆ ಬಾಗಿಲಿಗೆ ತೆರಳಿ ಗುಲಾಬಿ ಹೂ, ಕರ ಪತ್ರ ಹಂಚುವುದರ ಮೂಲಕ ಮತದಾನ ಜಾಗೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬರುವ ಮೇ-7- 5- 2024 ರಂದು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಮನೆ ಬಾಗಿಲಿಗೆ ತೆರಳಿ ನನ್ನ ಮತ ನನ್ನ ಹಕ್ಕು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.ಚುನಾವಣೆಯ ನಿರ್ದೇಶನದ ವಾಕ್ಯದೊಂದಿಗೆ ಮತದಾರರ ಮನವಲಿಸಿ ಮತದಾನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು ತಾ.ಪಂ ಅಥಣಿ ಜಿ.ಎಂ ಸ್ವಾಮಿ, ನರೇಗಾ ಸಹಾಯಕ ನಿರ್ದೇಶಕರು ಎಂ ಆರ್ ಕೊತ್ವಾಲ್, ಪುರಸಭೆ ಅಧಿಕಾರಿಗಳಾದ ಕುಮಾರ, ಯಳಮೇಲಿ, ನದಾಫ್, ರಾಜು, ಇತರ ಸಿಬ್ಬಂದಿಗಳು. ಹಾಗೂ ತಾ ಪಂ ಕಚೇರಿಯ ಸಿಬ್ಬಂದಿಗಳಾದ ಜೆ.ಎಚ್ ಪಟೇಲ್, ವಿ.ಡಿ ಮೋರೆ, ಸಂಗಪ್ಪ ಮುಳ್ಳಟ್ಟಿ, ಸ್ವಪ್ನ ಜಂಬಿಗಿ, ಟಿ ಎನ್ ಕೋಳಿ, ದೇವಾನಂದ ಮುಗಡ್ಲಿ, ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ: ರಾಜು.ಎಮ್. ವಾಘಮಾರೆ.