ಚಿತ್ರದುರ್ಗದ ಹತ್ತಿರ ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ, ಒಂದು ಸಾವು.

Bharath Vaibhav
ಚಿತ್ರದುರ್ಗದ ಹತ್ತಿರ ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ, ಒಂದು ಸಾವು.
WhatsApp Group Join Now
Telegram Group Join Now

ಬಾದಾಮಿ : ಬೆಂಗಳೂರಿನಿಂದ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮಕ್ಕೆ ಬೈಕ್ ಮೇಲೆ ಬರುತ್ತಿದ್ದ ಇಬ್ಬರು ಯುವಕರಾದ ಗಿರೀಶ್. ತಂದೆ ಮುತ್ತಣ್ಣ. ಸಾತಣ್ಣವರ ವಯಸ್ಸು (23) ಮತ್ತೊಬ್ಬ ಅಜಯ್. ತಂದೆ ಮುತ್ತಣ್ಣ. ಹೂಗಾರ ( ವಯಸ್ಸು 23) ಅಪಘಾತಕ್ಕೀಡಾದ ಯುವಕರು. ಬೈಕ್ ಮೇಲೆ ಬರುತ್ತಿದ್ದ ಈ ಇಬ್ಬರು ಯುವಕರು ಟಿಪ್ಪರ್ ನಡುವೆ ಗಂಭೀರ ಪ್ರಾಮಾಣದ ಅಪಘಾತವಾಗಿ ಗಿರೀಶ್ ಸಾತಣ್ಣವರ ಎಂಬ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನೊಬ್ಬ ಯುವಕ ಅಜಯ್. ತಂದೆ ಮುತ್ತಣ್ಣ.ಹೂಗಾರ ಈತನಿಗೂ ಗಂಭೀರ ಪ್ರಾಮಾಣದಅಘಾತವಾಗಿದ್ದು ಹುಬ್ಬಳ್ಳಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇಬ್ಬರೂ ಯುವಕರು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದವರು ಎಂದು ತಿಳಿದುಬಂದಿದ್ದು, ಬೆಂಗಳೂರಿನ ಒಂದು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್ ಮೇಲೆ ಇಬ್ಬರೂ ಯುವಕರು ಸ್ವಗ್ರಾಮಕ್ಕೆ ಆಗಮಿಸಬೇಕು ಎನ್ನುವ ಖುಷಿಯಲ್ಲಿದ್ದರೆ ವಿಧಿಯ ಆಟವೇ ಬೇರೆಯಾಗಿತ್ತು, ಚಿತ್ರದುರ್ಗದ ಹತ್ತಿರ ಅಪಘಾತವೆನ್ನುವ ಕಾರಣ ಮುಂದಿಟ್ಟು ಕಾಯ್ದು ಕುಳಿತಿದ್ದ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಸಾಯಂಕಾಲದ ಸುಮಾರು ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗ್ತಾ ಇದೆ. ಮೃತ ಗಿರೀಶ್ ಸಾತಣ್ಣವರ ಯುವಕನನ್ನು ಕಳೆದುಕೊಂಡ ಅವರ ಕುಟುಂಬಸ್ಥರು ಅಪಾರ ಬಂಧುಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಸ ವರ್ಷದ ಆರಂಭದಲ್ಲಿಯೇ ಆಗಿರುವ ಈ ಅಪಘಾತ ಇಡೀ ಗ್ರಾಮಕ್ಕೆ ಗ್ರಾಮವೇ ನಲುಗಿಹೋಗಿದೆ ಅಂತಾನೆ ಹೇಳಬಹುದು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!