Ad imageAd image

ಪಟಾಕಿ ಸಿಡಿಸಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ

Bharath Vaibhav
ಪಟಾಕಿ ಸಿಡಿಸಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ
WhatsApp Group Join Now
Telegram Group Join Now

ಬೆಳಗಾವಿ : ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆಗೆಂದು ತೆಗೆದುಕೊಂಡು ಹೋಗುವಾಗ 2 ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾದ ಘಟನೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಇಂದು ನಡೆದಿದೆ.

ಗಣೇಶ ತೆಗೆದುಕೊಂಡು ಹೋಗುವಾಗ ನಿರಂತರವಾಗಿ ಒಂದು ಯುವಕರ ಗುಂಪು ಪಟಾಕಿ ಹಾರಿಸಿದೆ. ಈ ವೇಳೆ ಇನ್ನೊಂದು ಗುಂಪಿನ ಗಣೇಶ ತೆಗೆದುಕೊಂಡು ಹೋಗಿತ್ತಿದ್ದ ಯುವಕರನ್ನು ಅಡ್ಡಪಡಿಸಿರುವ ಆರೋಪ ಕೇಳಿ ಬಂದಿದೆ. ನಿರಂತರ ಪಟಾಕಿ ಒಡೆಯುವುದಲ್ಲೇ ದಾರಿ ಬಿಡದ ಕಾರಣ 2 ಗುಂಪಿನ ನಡುವೆ ಮಾತಿನ ಚಕಮಕಿ ಏರ್ಪಟ್ಟು ಕಿರಿಕ್ ಆಗಿದೆ.

ಬಿಟ್ಟುಬಿಡದೇ ಅರ್ಧಗಂಟೆವರೆಗೂ ಪಟಾಕಿ ಸಿಡಿಸಿದ ಒಂದು ಗುಂಪು, ಸಾರ್ವಜನಿಕರಿಗೂ ಕಿರಿಕಿರಿಯುಂಟು ಮಾಡಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!