Ad imageAd image

ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳು ನಿಷೇಧ :ಪ್ರಚಾರ ಮಾಡಿದ್ದರೇ 1 ಕೋಟಿ ರೂ. ದಂಡ

Bharath Vaibhav
ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳು ನಿಷೇಧ :ಪ್ರಚಾರ ಮಾಡಿದ್ದರೇ 1 ಕೋಟಿ ರೂ. ದಂಡ
WhatsApp Group Join Now
Telegram Group Join Now

ನವದೆಹಲಿ: ಸರ್ಕಾರ ಆನ್‌ಲೈನ್‌ ಗೇಮಿಂಗ್ ಕಾಯ್ದೆ 2025 ಜಾರಿಗೊಳಿಸಿದೆ. ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸಿದೆ ಮತ್ತು ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಿದೆ. ಸರ್ಕಾರವು ಕರಡು ಆನ್‌ಲೈನ್ ಗೇಮಿಂಗ್ ನಿಯಮಗಳು, 2025ರ ಕುರಿತು ಭಾಗೀದಾರರಿಂದ ಅಭಿಪ್ರಾಯ ಆಹ್ವಾನಿಸಿದೆ.

ದೇಶದಲ್ಲಿ ಸುರಕ್ಷಿತ, ಜವಾಬ್ದಾರಿಯುತ ಮತ್ತು ಹೊಣೆಗಾರಿಕೆಯುಳ್ಳ ಆನ್‌ಲೈನ್ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.

ಈ ನಿಟ್ಟಿನಲ್ಲಿ, ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಹಾಗೂ ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸುವ ಉದ್ದೇಶದೊಂದಿಗೆ ಸರ್ಕಾರವು ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025′(“ಗೇಮಿಂಗ್ ಕಾಯ್ದೆ”) ಅನ್ನು ಜಾರಿಗೊಳಿಸಿದೆ.

ಗೇಮಿಂಗ್ ಕಾಯ್ದೆಯು ಅವಕಾಶದ ಆಟಗಳು, ಕೌಶಲ್ಯದ ಆಟಗಳು ಅಥವಾ ಇವೆರಡರ ಸಂಯೋಜನೆಯನ್ನು ಒಳಗೊಂಡಿರುವ ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳನ್ನು ಸಮಗ್ರವಾಗಿ ನಿಷೇಧಿಸುತ್ತದೆ.

ಇಂತಹ ಆಟಗಳ ಜಾಹೀರಾತು, ಪ್ರಚಾರ ಮತ್ತು ಸುಗಮಗೊಳಿಸುವಿಕೆಯನ್ನು, ಬ್ಯಾಂಕುಗಳು ಅಥವಾ ಪಾವತಿ ವ್ಯವಸ್ಥೆಗಳ ಮೂಲಕ ಸಂಬಂಧಿತ ಹಣಕಾಸು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವುದನ್ನು ಕೂಡ ಇದು ನಿಷೇಧಿಸುತ್ತದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ನಿಬಂಧನೆಗಳ ಅಡಿಯಲ್ಲಿ ಕಾನೂನುಬಾಹಿರ ವೇದಿಕೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಈ ಕಾಯ್ದೆಯು ಪ್ರಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ.

ಗೇಮಿಂಗ್ ಕಾಯ್ದೆಯು ಉಲ್ಲಂಘನೆಗಳಿಗಾಗಿ ಕಠಿಣ ದಂಡಗಳನ್ನು ವಿಧಿಸುತ್ತದೆ. ಆನ್‌ಲೈನ್ ಹಣದ ಆಟಗಳನ್ನು ನೀಡುವುದು ಅಥವಾ ಅಂತಹ ಆಟಗಳಿಗೆ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವುದಕ್ಕಾಗಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಕೋಟಿ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಆನ್‌ಲೈನ್ ಹಣದ ಆಟಗಳನ್ನು ನೀಡುವುದು ಅಥವಾ ಸುಗಮಗೊಳಿಸುವುದಕ್ಕಾಗಿ ಎರಡನೇ ಬಾರಿ ಅಥವಾ ನಂತರದ ಅಪರಾಧ ಸಾಬೀತಾದಲ್ಲಿ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ(ಇದು 5 ವರ್ಷಗಳವರೆಗೆ ವಿಸ್ತರಿಸಬಹುದು) ಮತ್ತು ಕನಿಷ್ಠ ಒಂದು ಕೋಟಿ ರೂಪಾಯಿ ದಂಡ (ಇದು ಎರಡು ಕೋಟಿ ರೂಪಾಯಿಗಳವರೆಗೆ ವಿಸ್ತರಿಸಬಹುದು) ವಿಧಿಸಬಹುದಾಗಿದೆ.

ಇಂತಹ ಆನ್‌ಲೈನ್ ಹಣದ ಆಟಗಳನ್ನು ಜಾಹೀರಾತಿಗಾಗಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐವತ್ತು ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಜಾಹೀರಾತು ನೀಡಿಕೆಗಾಗಿ ಎರಡನೇ ಬಾರಿ ಅಥವಾ ನಂತರದ ಅಪರಾಧ ಸಾಬೀತಾದಲ್ಲಿ ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆ (ಇದು 3 ವರ್ಷಗಳವರೆಗೆ ವಿಸ್ತರಿಸಬಹುದು) ಮತ್ತು ಕನಿಷ್ಠ ಐವತ್ತು ಲಕ್ಷ ರೂಪಾಯಿ ದಂಡ (ಇದು ಒಂದು ಕೋಟಿ ರೂಪಾಯಿಗಳವರೆಗೆ ವಿಸ್ತರಿಸಬಹುದು) ವಿಧಿಸಬಹುದಾಗಿದೆ.

ಮೇಲಿನವುಗಳ ಜೊತೆಗೆ, ಗೇಮಿಂಗ್ ಕಾಯ್ದೆಯು ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳ ಗುರುತಿಸುವಿಕೆ ಮತ್ತು ಉತ್ತೇಜನ, ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ದ ಸ್ಥಾಪನೆ, ಆನ್‌ಲೈನ್ ಆಟಗಳಿಗಾಗಿ ಪಾರದರ್ಶಕ ನೋಂದಣಿ ಕಾರ್ಯವಿಧಾನ, ಬಳಕೆದಾರರಿಗಾಗಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮತ್ತು ನಿಷೇಧಿತ ಆನ್‌ಲೈನ್ ಹಣದ ಆಟಗಳು ಹಾಗೂ ಅದಕ್ಕೆ ಸಂಬಂಧಿಸಿದ ಹಾನಿಗಳ ವಿರುದ್ಧ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತದೆ.

ಅನುಮತಿಸಬಹುದಾದ ಆಟಗಳನ್ನು ವರ್ಗೀಕರಿಸುವುದು ಮತ್ತು ನೋಂದಾಯಿಸುವುದು, ಆಟವು ಹಣದ ಆಟವೇ ಅಲ್ಲವೇ ಎಂಬುದನ್ನು ನಿರ್ಧರಿಸುವುದು, ಅಭ್ಯಾಸ ಸಂಹಿತೆಗಳನ್ನು ಹೊರಡಿಸುವುದು ಮತ್ತು ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವುದು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.

ಕೇಂದ್ರೀಯ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರ ನೀಡುವ ಮೂಲಕ, ಈ ಕಾಯ್ದೆಯು ಸಮನ್ವಯದ ನೀತಿ ಬೆಂಬಲ, ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಒದಗಿಸುವ ಮತ್ತು ತಾಂತ್ರಿಕ ಬೆಳವಣಿಗೆಯು ರಾಷ್ಟ್ರೀಯ ಹಿತಾಸಕ್ತಿ ಮತ್ತು ಗ್ರಾಹಕ ರಕ್ಷಣೆಯ ತತ್ವಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆನ್‌ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಗೇಮಿಂಗ್ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2 ಅಕ್ಟೋಬರ್, 2025 ರಂದು ಸಾರ್ವಜನಿಕ ಸಮಾಲೋಚನೆಗಾಗಿ ‘ಕರಡು ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ನಿಯಮಗಳು, 2025’ ಅನ್ನು ಪ್ರಕಟಿಸಿದೆ.

ಕಾನೂನು ರಚನೆಯಲ್ಲಿ ಒಳಗೊಳ್ಳುವಿಕೆಯ ಮನೋಭಾವಕ್ಕೆ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಭಾಗೀದಾರರು ಸೇರಿದಂತೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

ಈ ಮಾಹಿತಿಯನ್ನು ಇಂದು ಲೋಕಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ರಾವ್ ರಾಜೇಂದ್ರ ಸಿಂಗ್ ಅವರ ಪ್ರಶ್ನೆಗೆ ಒದಗಿಸಿದ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!