ತುಮಕೂರು: ಅಪ್ರಾಪ್ತರಿಗೆ ಬೈಕ್ ಚಾಲನೆ ಮಾಡೋದಕ್ಕೆ ಕೊಡುವಂತ ಪೋಷಕರು ಎಚ್ಚರಿಕೆ ವಹಿಸೋದು ಒಳಿತು. ಇಲ್ಲವಾದಲ್ಲಿ ದಂಡ ಕಟ್ಟಿಟ್ಟ ಬುದ್ಧಿಯಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೊಲೀಸರಿಂದ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಸಂದರ್ಭದಲ್ಲಿ ಬೈಕ್ ಜಪ್ತಿ ಮಾಡಲಾಗಿತ್ತು.ಈ ಸಂಬಂಧ ಪ್ರಕರಣ ದಾಖಲಿಸಿ ತಿಪಟೂರು ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದಂತ ತಿಪಟೂರು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಕೋರ್ಟ್ ನ್ಯಾಯಮೂರ್ತಿಗಳು ನಿಂಗರಾಜು ಎನ್ನುವಂತ ಅಪ್ರಾಪ್ತ ಬಾಲಕನ ಪೋಷಕರಿಗೆ 25,000 ದಂಡವನ್ನು ವಿಧಿಸಿದೆ.
ಈ ಮೂಲಕ ಅಪ್ರಾಪ್ತನಿಗೆ ಬೈಕ್ ಚಾಲನೆಗೆ ನೀಡಿದಂತ ತಂದೆಗೆ ದಂಡದ ಶಾಕ್ ನೀಡಿದೆ. ಸೋ ಪೋಷಕರಾದಂತ ನೀವು ಎಚ್ಚರಿಕೆ ವಹಿಸಿ. ಅಪ್ರಾಪ್ತರಿಗೆ ಯಾವುದೇ ವಾಹನ ಚಾಲನೆ ನೀಡಲು ಕೊಡಬೇಡಿ ಎಂಬುದು ನಮ್ಮ ಮನವಿ ಕೂಡ ಆಗಿದೆ.




