ಚಿಕ್ಕೋಡಿ: ಬಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ತಗೊಲಿ ಸುಮಾರು 5 ಲಕ್ಷ ಹಾನಿಯಾಗಿರುವ ಘಟನೆ ಸಂಭವಿಸಿದೆ.
ಕೊಲ್ಹಾಪುರ ಸಾಗರ್ ಸಾಳುoಕೆ ಎಂಬುವರಿಗೆ ಸೇರಿದ ಲಾರಿ ಶಿರೋಳ ದತ್ತ ಕಾರ್ಖಾನೆಯಿಂದ ಬಗ್ಯಾಸ್ ತುಂಬಿಕೊಂಡು
ಫೈವ್ ಸ್ಟಾರ್ ಎಂಐಡಿಸಿ ಕಾಗಲ್ ಕಡೆಗೆ ಹೋಗುತ್ತಿತ್ತು ಲಾರಿ ಕಸನಾಳ ಗ್ರಾಮ ಸಮಿಪಿ ಸುತ್ತಿದ್ದoತೆ ಚಾಲಕನ ಕ್ಯಾಬಿನನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು ಲಾರಿ ಕ್ಯಾಬಿನ್ ಬೆಂಕಿಗೆ ಆಹುತಿಯಾಗುವುದನ್ನು ಲಾರಿ ಚಾಲಕನು ಹೊರಗೆ ಜಿಗಿದು ತಮ್ಮ ಜೀವ ಉಳಿಸಿಕೊಂಡನು .
ಗ್ರಾಮಸ್ಥರು ತಳಕ್ಕೆ ಧಾವಿಸಿ, ತಕ್ಷಣ ಜವಾರ್, ಹಾಗೂ ಹುಪ್ಪರಿ ಮತ್ತು ಸದಲಗಾ ಅಗ್ನಿನಿಶಾಮಕ ಠಾಣೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.
ಈ ಅಗ್ನಿ ವಾಯರ್ ಶಾರ್ಟ್ ಸರ್ಕಿಟಿನಿಂದ ತಗಳಿರಬಹುದು ಎಂದು ಶಂಕಿಸಲಾಗಿದೆ ಬೆಂಕಿ ನಿಯಂತ್ರಸಲು ಸದಲಗಾ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹರಸಾಹಸ ಪಟ್ಟರು.
ವರದಿ: ರಾಜು ಮುಂಡೆ ನಿಪ್ಪಾಣಿ.




