ಚಾಮರಾಜನಗರ : ಚಾಮರಾಜನಗರದ ವಾರ್ಡ್ ನಂಬರ್ 11 ರಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಾಲೆ ಇದೆ
ದಿನೆ ದಿನೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಅಲ್ಲಿ ಕಸವನ್ನು ಸಹ ವಿಲೇವಾರಿ ಮಾಡದೇ ಇದ್ದಾರೆ.
ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಮೌನವಾಗಿದ್ದರೆ ಎಂದು ವಾರ್ಡ್ ನಲ್ಲಿರುವ ನಿವಾಸಿ ಯಾದಂತಹ ಹರೀಶ್ ರವರು ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗ ಹೆಚ್ಚೆತ್ತುಕೂಂಡು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರದ 11ನೇ ವಾರ್ಡ್ ನ ನಿವಾಸಿಯಾದ ಹರಿಶ್ ಮಾತನಾಡಿ 11ನೇ ವಾರ್ಡ್ ನಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿದೆ.
ಒಂದು ತಿಂಗಳಿಂದ ನೀರಿನ ಸಮಸ್ಯೆ ಹಾಗೂ ಕಸ ವಿಲೇವಾರಿ ಮಾಡುವ ಸಮಸ್ಯೆಗಳಿದ್ದರೂ ಸಹ ಕಂಡು ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಇತ್ತೀಚೆಗೆ ನೂತನವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ರಸ್ತೆ ಮಾಡುವ ಮುನ್ನ ಯೂಜಿಡಿ ಮಾಡಿ ರಸ್ತೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಸಂದರ್ಭ ಬರುತ್ತದೆ ಎಂದರು.
ಆದ್ದರಿಂದ ಸಂಬಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ನಗರದ ಹನ್ನೊಂದನೇ ವಾರ್ಡ್ ನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಿಳಿಸಿದ್ದಾರ.
ವರದಿ : ಸ್ವಾಮಿ ಬಳೇಪೇಟೆ




