Ad imageAd image

ಸತ್ಯ ಯುಗಕ್ಕೆ ಅಡಿಗಲ್ಲು ಕಾರ್ಯಕ್ರಮ.

Bharath Vaibhav
ಸತ್ಯ ಯುಗಕ್ಕೆ ಅಡಿಗಲ್ಲು ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಬ್ರಹ್ಮಕುಮಾರಿ ಆಶ್ರಮದಲ್ಲಿ, ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಉದ್ಘಾಟನೆ ನಿಮಿತ್ತವಾಗಿ ಸತ್ಯ ಯುಗ ಅಡಿಗಲ್ಲು ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶರಾದ ಶ್ರೀ ಜಿ.ಕೆ.ಗೋಖಲೆಯವರು ಜಗತ್ತಿನಲ್ಲಿ ಯುದ್ಧಗಳು, ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಹೆಚ್ಚಾಗಿದ್ದು ಇದನ್ನು ಕೊನೆಗೊಳಿಸಲು ದುಷ್ಟ ಗುಣಗಳ ಪ್ರತೀಕವಾದ ಕಲಿಯುಗ ಕೊನೆಗೊಳ್ಳಬೇಕಾಗಿದ್ದು ಅವಶ್ಯಕವಾಗಿದೆ. ಜನರಲ್ಲಿ ಸದಾಚಾರ ಸದ್ಗುಣಗಳ ಪ್ರತೀಕವಾಗಿರುವ ಸತ್ಯ ಯುಗದ ಆರಂಭವಾಗುವುದು ಅವಶ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಕಲಾವತಿ ಅಮ್ಮನವರು ಇದೇ ಭೂಮಿಯಲ್ಲಿ ಒಂದು ಕಾಲಕ್ಕೆ ಸತ್ಯ ಯುಗವು ಇತ್ತು. ಆ ಸತ್ಯ ಯುಗ ಮತ್ತೆ ಆರಂಭವಾಗಲಿದ್ದು, ಲಕ್ಷ್ಮಿ ಮತ್ತು ನಾರಾಯಣರು ಭೂಲೋಕದ ರಾಜ್ಯವನ್ನು ಆಳಲಿದ್ದಾರೆ. ಇದಕ್ಕಾಗಿ ನಮ್ಮೆಲ್ಲರಲ್ಲಿ ಸತ್ಯ ಯುಗದ ಇಚ್ಛೆಯನ್ನು ಹೊಂದುವುದು ಅದಕ್ಕಾಗಿ ಕಾರ್ಯೋನ್ಮುಖರಾಗುವುದು ಅವಶ್ಶವಾಗಿದೆ ಎಂದು ಹೇಳಿದರು. ಅತಿಥಿಗಳಾಗಿ ಪುರಸಭಾ ಸದಸ್ಯೆ ಮಲಕಮ್ಮಾ ಕಣೆಕಲ, ಶ್ರೀ ಬಿ.ಕೆ. ಬನ್ನಪ್ಪಾ ಹಾಗೂ ಶ್ರೀ ಬಿ.ಆರ್. ಅಣ್ಣಾಸಾಗರವರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ಸತ್ಯ ಪ್ರಾಮಾಣಿಕತೆಯ ನಿಷ್ಠೆ ತೋರಿಸುತ್ತಿರುವುದಕ್ಕೆ ಶ್ರೀ ಸಂತೋಷಕುಮಾರ ತೋಟ್ನಳ್ಳಿಯವರಿಗೆ “ಸತ್ಯ ಯುಗಕ್ಕೆ ಅಡಿಗಲ್ಲಿನ ಸಾಧಕ” ಪ್ರಶಸ್ತಿಯನ್ನು ಟ್ರಸ್ಟ್ ಅಧ್ಯಕ್ಷೆ ಶಿವಕಾಂತಮ್ಮ ಚಿಮ್ಮನಚೋಡಕರ ಪ್ರಧಾನ ಮಾಡಿ ಗೌರವಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸರ್ವರೂ ದೀಪಗಳನ್ನು ಬೆಳಗುವುದರ ಮೂಲಕ ದೀಪಾವಳಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗಣಪತರಾವ ಚಿಮ್ಮನಚೋಡಕರ್ ಅಧ್ಯಕ್ಷತೆ ವಹಿಸಿದ್ದರು. ಲಿಂಗಾರೆಡ್ಡಿ ಶೇರಿ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಸಿದ್ದಪ್ಪಾ ತಳ್ಳಳ್ಳಿ, ನೃಪತುಂಗ ಅಧ್ಯಯನ ಸಂಸ್ಥೆಯ ಪ್ರಭಾಕರ ಜೋಶಿ, ವಿಜ್ಞಾನ ಪರಿಷತ್ತಿನ ಕುಂಠೆಪ್ಪಾ ಗೌರೀಪುರ, ಸೋಮಶೇಖರ್ ಪಾಟೀಲ್, ಸೌಭಾಗ್ಯಮ್ಮ ಮಳಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್, ವಿಜಯಕುಮಾರ ಗಡಿನಾಡ, ಕಲ್ಪನಾ ಕೊಂಬಿನ, ಬಿಜೆಪಿ ಮುಖಂಡರಾದ ಲಕ್ಷ್ಮಿನಾರಾಯಣ ಚಿಮ್ಮನಚೋಡಕರ, ಗೌತಮ ನಿರಂಜಿ, ಕಲ್ಪನಾ ಕೊಂಬಿನ, ಬಸವರಾಜೇಶ್ನರಿ ಗೌರೀಪುರ, ಸುಭಾಸ ಕಣೇಕಲ ಭೀಮಾಶಂಕರ, ಅಗ್ನಿವೀರ ಸಂಜಯ, ಕೃಷ್ಣಾ, ದೇವಿಂದ್ರ, ವಿಶಾಲ, ರಕ್ಷಿತಾ, ಮುಂತಾದವರು ಭಾಗವಹಿಸಿದ್ದರು.

ಸೂರ್ಯ ನಾರಾಯಣ ಚಿಮ್ಮನಚೋಡಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸತ್ಯ ಯುಗಕ್ಕೆ ಅಡಿಗಲ್ಲು ಹಾಕುವುದೇ ಟ್ರಸ್ಟ್ ಉದ್ದೇಶವಾಗಿದೆ ಎಂದು ಹೇಳಿದರು.ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ವರ್ಷಾ ಸ್ವಾಗತಿಸಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!