Ad imageAd image

ಟಿವಿ ನೋಡುವುದು ಕಡಿಮೆ ಮಾಡು ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ

Bharath Vaibhav
ಟಿವಿ ನೋಡುವುದು ಕಡಿಮೆ ಮಾಡು ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ
WhatsApp Group Join Now
Telegram Group Join Now

ಚಿಕ್ಕಮಗಳೂರು: ಟಿವಿ ನೋಡುವುದು ಕಡಿಮೆ ಮಾಡು ಎಂದಿದ್ದಕ್ಕೆ ಬಾಲಕಿಯೊಬ್ಬಳು ವೇಲ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಟಿವಿ ನೋಡುವುದನ್ನು ಕಡಿಮೆ ಮಾಡು ಎಂಬುದಾಗಿ ತಾಯಿ ಬೈದಿದ್ದರು.ಇದರಿಂದಾಗಿ ನೊಂದಂತ ಬಾಲಕಿ ಸುಪ್ರಿತಾ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರತಿ ದಿನ ಟಿವಿ ನೋಡುತ್ತ ಬಾಲಕಿ ಸುಪ್ರಿತಾ ಊಟ ಮಾಡುತ್ತಿದ್ದಳು. ಇಂದು ಕೂಡ ಹಾಗೆಯೇ ಊಟ ಮಾಡುತ್ತಿದ್ದಾಗ ಬಾಲಕಿ ಸುಪ್ರಿತಾ ಕೈಯಿಂದ ತಟ್ಟೆ ಕೆಳಗೆ ಬಿದ್ದಿತ್ತು. ಇದರಿಂದ ಕೋಪಗೊಂಡಂತ ಸುಪ್ರಿತಾ ತಾಯಿ ಟಿವಿ ನೋಡುವುದನ್ನು ಕಡಿಮೆ ಮಾಡು ಎಂಬುದಾಗಿ ಬುದ್ಧಿ ಹೇಳಿದ್ದರು.

ಸುಪ್ರಿತಾ ತಾಯಿ ಕೆಲಸಕ್ಕೆ ಹೋದಂತ ಸಂದರ್ಭದಲ್ಲಿ ಮನನೊಂದು ವೇಲ್ ನಿಂದ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!