ವಿಜಯಪುರ: ಕೆಲ ದಿನಗಳ ಹಿಂದಷ್ಟೇ 400 ಕೋಟಿ ಹಣ ದರೋಡೆ, ಅದಕ್ಕೂ ಮೊದಲು ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ಹಣ ದರೋಡೆ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದವು. ಈ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ರಾಬರಿ ನಡೆದಿದೆ. ವಿಜಯಪುರದಲ್ಲಿ ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನದ ಅಂಗಡಿ ದರೋಡೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿಯಲ್ಲಿ ಚಿನ್ನದ ಅಂಗಡಿಗೆ ನುಗ್ಗಿದಂತ ಹೆಲ್ಮೆಟ್ ಧರಿಸಿದ್ದಂತ ದರೋಡೆ ಕೋರರು, ಮಹಾರುದ್ರ ಕಂಚಗಾರ ಅವರ ಅಂಗಡಿಯನ್ನು ದೋಚಿದ್ದಾರೆ. ಚಿನ್ನದ ಅಂಗಡಿಗೆ ತೆರಳಿದ್ದಂತ ವೃದ್ಧೆಯನ್ನು ಪಿಸ್ತೂಲ್ ತೋರಿಸಿ ಹೆದರಿಸಿ ಕಳುಹಿಸಿದ್ದಾರೆ.
ಗಾಳಿಯಲ್ಲಿ 2 ಸುತ್ತು ಗುಂಡನ್ನು ದರೋಡೆಕೋರರು ಹಾರಿಸಿದಾಗ, ಆತ್ಮಲಿಂಗ ಹೂಗಾರ ಎಂಬುವರ ಕಾಲಿಗೆ ತಾಗಿ ಗಾಯ ಕೂಡ ಆಗಿದೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ್ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




