Ad imageAd image

3ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಅದ್ದೂರಿಯ ಚಾಲನೆ 

Bharath Vaibhav
3ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಅದ್ದೂರಿಯ ಚಾಲನೆ 
WhatsApp Group Join Now
Telegram Group Join Now

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರುಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ಸಭಾಭವನದಲ್ಲಿ 3ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಅದ್ದೂರಿಯಾಗಿ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶಾಂತರಾಮ ಜುಗಳೆ ಅವರು ಮಾತನಾಡಿ ಶಿರುಗುಪ್ಪಿ ಗ್ರಾಮದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿರುವ ಸಂಗತಿ ಹೆಮ್ಮೆಯ ಸಂಗತಿ. 6 ರಾಜ್ಯಗಳ ಕರಾಟೆ ಸ್ಪರ್ದಾಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕರಾಟೆ ಕ್ರೀಡೆಯಲ್ಲಿ ಕಲಿಯುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದರು.

ಬಳಿಕ ರಾಷ್ಟ್ರೀಯ ಕರಾಟೆ ಅಧ್ಯಕ್ಷರಾದ ಮೋಹನಕುಮಾರ ರಜಪೂತ ಮಾತನಾಡಿ ಶಿರಗುಪ್ಪಿ ಗ್ರಾಮದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ‌.

ಕರಾಟೆ ಕ್ರೀಡೆಯು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅತ್ಯುತ್ತಮವಾದ ಕ್ರೀಡೆವಾಗಿದೆ. ಪೋಷಕರು ಸಹ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕರಾಟೆಯ ತರಬೇತಿಯನ್ನು ನೀಡಿದರೆ, ಆ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಬಳಿಕ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಹಾಗೂ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ರಾಜು ಪಾಟೀಲ ಅವರು ಮಾತನಾಡಿ ಈ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಮಾರು 6 ರಾಜ್ಯಗಳಿಂದ ಸುಮಾರು 310 ಕರಾಟೆ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.

ಉತ್ತರ ಪ್ರದೇಶ, ರಾಜಸ್ಥಾನ, ಅಸ್ಸಾಂ, ಮಹಾರಾಷ್ಟ್ರ, ದೆಹಲಿ ,ಗೋವಾ ರಾಜ್ಯದ ಕರಾಟೆ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜುಗೂಳ ಗ್ರಾಮದ ಕೆ ಎಸ್.ಎಸ್. ಫ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮೃತ್ಯುಂಜಯ ಹೂಗಾರ,ಶಿಕ್ಷಣ ಪರಿವೀಕ್ಷಕರಾದ ಲಕ್ಷ್ಮಣ ತೋರಣಗಟ್ಟಿ,ಶಿವಾನಂದ ಹಳ್ಳಿಗೌಡ್ರು,ಮಹಾವೀರ ಜೀರಗಿಹಾಳ,ಮಾಯಾಪ್ಪಾ ಪೂಜಾರಿ,ಲಕ್ಷ್ಮಣ ಚೌಗಲಾ,ತೇಜಪಾಲ ಉಪಾಧ್ಯೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!