ಖಾನಾಪುರ:- ಕನ್ನಡ ರಾಜ್ಯೋತ್ಸವದ ನಿಮಿತ್ಯ ರಾಜ್ಯದೆಲ್ಲೆಡೆ ಸಂಭ್ರಮ ತುಂಬಾನೇ ಜೋರಾಗಿದ್ದು, ಗಡಿನಾಡು ಬೆಳಗಾವಿಯ ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದಲ್ಲೂ ಇಂದು ಲೋಂಡಾ ಕನ್ನಡಿಗರ ಅಭಿಮಾನಿಗಳ ಬಳಗ ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ಸಹಯೋಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು, ಪತ್ರಕರ್ತ ಶಶಿಕಾಂತ ತಳವಾರ ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ ಮಾಡಲಾಯಿತು, ರಾಜ್ಯಾಧ್ಯಕ್ಷರಾದ ಸುನಿಲ್ ಎಂ, ಪಿಡಿಒ ಶಿವಾನಂದ ಖೋತಾ, ಅಧ್ಯಕ್ಷ ನೀಲಕಂಠ, ಸೇರಿದಂತೆ ಎಲ್ಲಾ ಕನ್ನಡ ಪರ ಹೋರಾಟ ಗಾರರು ಮಾತನಾಡಿ ಉಪಸ್ಥಿತರಿದ್ದರು.
ವರದಿ;- ಬಸವರಾಜು. ರಾಜ್ಯ




