Ad imageAd image

ನಿಟ್ಟೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬೆ ದೇವಿಯ ಅದ್ದೂರಿ ಮೆರವಣಿಗೆ.

Bharath Vaibhav
ನಿಟ್ಟೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬೆ ದೇವಿಯ ಅದ್ದೂರಿ ಮೆರವಣಿಗೆ.
WhatsApp Group Join Now
Telegram Group Join Now

ಸಿರುಗುಪ್ಪ : –ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರಿಕಾಂಬೆ ದೇವಿಯ ಗಂಗೆಪೂಜೆ, ವಿವಿಧ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.

 

ಹಲವಾರು ವರ್ಷಗಳಿಂದಲೂ ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದು ಗ್ರಾಮದ ಎಲ್ಲಾ ಸಮುದಾಯವು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳುತ್ತಾರೆ.ಹಬ್ಬದ ನಿಮಿತ್ತ ದೇವಸ್ಥಾನದಲ್ಲಿ ಎಲೆಪೂಜೆ, ಉಡಿತುಂಬುವುದು, ಕಾಯಿ ಕರ್ಪೂರ ಎಡೆಯ ನೈವೇದ್ಯ ಸಲ್ಲಿಸಿ ಮಹಾಮಂಗಳಾರತಿ ಸಲ್ಲಿಸಲಾಯಿತು. ಹರಕೆ ಹೊತ್ತ ಭಕ್ತರಿಂದ ದೀಡ್ ನಮಸ್ಕಾರ, ಜವಳ ಕಾರ್ಯಕ್ರಮಗಳು ಜರುಗಿದವು.

ಉತ್ತಮ ಮಳೆಯಿಂದಾಗಿ ಗ್ರಾಮದಲ್ಲಿ ಹರಿಯುವ ತುಂಗಾಭದ್ರೆ ನದಿಯು ಪ್ರತಿವರ್ಷ ತುಂಬಿ ಹರಿದು ಸಮೃದ್ದ ಬೆಳೆ ದೊರೆಯಲಿ, ಸುಖ, ಶಾಂತಿ, ನೆಮ್ಮದಿಯ ವಾತಾವರಣವು ಸಿಗಲೆಂದು ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೇಡಿದ ವರಗಳನ್ನು ನೀಡುವ ತಾಯಿಯೆಂಬ ನಂಬಿಕೆಯು ಭಕ್ತರ ಮನದಲ್ಲಿ ತುಂಬಿದೆ.ದೇವಸ್ಥಾನದಿಂದ ಸಾಯಂಕಾಲ ದೇವಿಯ ಮೂರ್ತಿಗಳನ್ನು ನದಿತಟದಲ್ಲಿ ಕರೆದೊಯ್ದು ಗಂಗೆಯ ಪೂಜೆಯನ್ನು ಮಾಡಿ ನಂತರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ಶ್ರದ್ದಾಭಕ್ತಿಯಿಂದ ಹಬ್ಬವನ್ನು ಆಚರಿಸಲಾಯಿತು.

ಗ್ರಾಮದಲ್ಲಿ ಹರಿಯುವ ತುಂಗಾಭದ್ರ ನದಿತಟಕ್ಕೆ ಶ್ರಾವಣ ಮಾಸದ ನಿಮಿತ್ತ ಪಕ್ಕದ ಉಪ್ಪಾರ ಹೊಸಳ್ಳಿಯ ಆಂಜನೇಯ್ಯಸ್ವಾಮಿ, ತೆಕ್ಕಲಕೋಟೆ ಪಟ್ಟಣದ ವರವಿನ ಮಲ್ಲೇಶ್ವರ ಸ್ವಾಮಿ ಮೂರ್ತಿಯನ್ನು ಕರೆತಂದು ಗಂಗೆ ಪೂಜೆಗೈದು ಪಲ್ಲಕ್ಕಿ ಮೂಲಕ ದೇವಸ್ಥಾನಕ್ಕೆ ಭಕ್ತರು ಹೊತ್ತುಕೊಂಡು ಹೋಗುತ್ತಾರೆ.ಶ್ರೀ ಹುಲಿಗೆಮ್ಮ, ಶ್ರೀ ಎಲ್ಲಾ ಯಲ್ಲಮ್ಮ ದೇವಿಯರ ಗಂಗೆಪೂಜೆಯು ಇದೇ ಗ್ರಾಮದ ನದಿತಟದಲ್ಲಿ ಜರುಗುವುದು ವಿಶೇಷವಾಗಿದೆ.

ವರದಿ : ಶ್ರೀನಿವಾಸ ನಾಯ್ಕ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!