ನಿಡಗುಂದಿ.:-ಹರಿಭಕ್ತರಾದ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಕೆಲಸವನ್ನು ತ್ಯಜಿಸಿ ಹರಿದಾಸರಾದರು ಮತ್ತು ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು.
ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ, ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ.
ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳನ್ನು ರಚಿಸಿದರು.250 ದಾಸರಲ್ಲಿ ಅತೀ ಪ್ರಮುಖರಾದ ಕನಕದಾಸರ ಭಾವಚಿತ್ರಕ್ಕೆ ಪೂಜಿಯನ್ನ ಸಲ್ಲಿಸಿ, ಗುಲಾಲ್ ಹಚ್ಚಿಕೊಂಡು, ಪಾಟಕಿ ಸಿಡಿಸಿ, ರಿಬ್ಬನ್ ಕಟ್ ಮಾಡದುವರ ಮೂಲಕ ಚಾಲನೆ ಮಾಡಿದರು.ಪಟ್ಟಣದ ಪ್ರಮುಖ ಬಿದಿ ಬಿದಿಗಳಲ್ಲಿ ಕುಂಬಮೇಳ ಧ್ವನಿವರ್ಧಕದೊಂದಿಗೆ, ಹೆಣ್ಣುಮಕ್ಕಳು ಊರಿನ ಗುರು ಹಿರಿಯರು,ಯುವಕರು ಹಾಗೂ ಸಾರ್ವಜನಿಕರಿಂದ ಅದ್ದೂರಿಯ ಮೆರವಣಿಗೆ ಜರುಗಿತು.
ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಬಿ.ಟಿ. ಗೌಡರ್, ರಮೇಶ್ ಮಾಗಿ,ಪರಶುರಾಮ ಕಾರಿ, ಶಿವಾನಂದ ಮುಚ್ಚoಡಿ,ಆರ್ ಎ ನದಾಪ್, ಶೇಖರ್ ರೂಡಗಿ, ತಮ್ಮಣ್ಣ ಬಂಡಿವಡ್ಡರ್, ಗಂಗಾದರ್ ವಾರದ, ನಾರಾಯಣ ಹುಗ್ಗಿ, ಚಂದ್ರಪ್ಪ ದಳವಾಯಿ, ಬಸು ಕುರಿ, ಅಮರ ಸಾರವಾಡ, ರಾಜು ಚಿತ್ರದುರ್ಗ,ಮುತ್ತಪ್ಪ ಹುಗ್ಗಿ, ಗುಂಡಪ್ಪ ಕುರಜೋಗಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ವರದಿ :ಅಲಿ ಮಕಾನದಾರ