ಕಂದಗಲ್ಲ : ಮಹಾ ಶಿವಶರಣೆ ಕಂಬಳಿಹಾಳ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಭಾವಚಿತ್ರದ ಚಕ್ಕಡಿಯಾತ್ರೆ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಕಂದಗಲ್ಲ ಗ್ರಾಮಕ್ಕೆ ಆಗಮಿಸದಾಗ ಭವ್ಯ ಸ್ವಾಗತ ದೊರೆಯಿತು.
ಅಮ್ಮನವರ ದೀಕ್ಷಾಗುರು ಗುಡದೂರಿನ ಲಿ, ದೊಡ್ಡಬಸವರ್ಯರ ಜಾತ್ರಾ ಮಹೋತ್ಸವ ಹಾಗೂ ಬಸವಾರ್ಯ ತಾತನವರ ಪುಣ್ಣ್ಯ ಸ್ಮರಣತ್ಸವ ನಿಮಿತ್ತ ಸಜ್ಜಲಗುಡ್ಡ ಕಂಬಳಿಹಾಳದ ಶರಣಮ್ಮನವರ ಮಠದ ಧರ್ಮಧಿಕಾರಿ ದೊಡ್ಡಬಸವರ್ಯ ತಾತನವರು ಹಾಗೂ ಶರಣಮ್ಮ ತಾಯಿಯವರ ನೇತೃತ್ವದಲ್ಲಿ ಚಕ್ಕಡಿ ಟ್ರ್ಯಾಕ್ಟರ, ಸೇರಿದಂತೆ ಇನ್ನಿತರ ವಾಹನಗಳ ಹಾಗೂ ಸಹಸ್ರಾರು ಭಕ್ತರ ಕಾಲ್ನಡಿಗೆ ಮೂಲಕ ಆಗಮಿಸಿದ ಮೆರವಣಿಗೆಯನ್ನು ಕಂದಗಲ್ಲ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಹತ್ತಿರ ಗ್ರಾಮದ ಸರ್ವ ಧರ್ಮದ ಜನರು ಸುಮಂಗಲೆಯರು ಆರತಿ ಬೆಳಗಿ ಕಾಯಿ ಕರ್ಪೂರ ಅರ್ಪಿಸಿ ಸ್ವಾಗತಿಸಿಕೊಂಡರು.
ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಚಕ್ಕಡಿ ಯಾತ್ರೆಯನ್ನು ಕೆ ಜಿ ಎಸ್ ಶಾಲೆಯ ಹತ್ತಿರ ಬೀಳ್ಕೊಡಲಾಯಿತು.
ಪ್ರಗತಿಪರ ರೈತರಾದ ಚನ್ನಪ್ಪಗೌಡ ನಾಡಗೌಡ್ರ, ರಾಹುಲ್ ಧಣಿ, ತಾ ಪ ಮಾಜಿ ಅಧ್ಯಕ್ಷ ಮಹಾಂತೇಶ್ ಕಡಿವಾಲ,ಗ್ರಾಮ ಪ ಮಾಜಿ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಗ್ರಾಮ ಪ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಬಸೆಟ್ಟಪ್ಪ ಸಜ್ಜನ, ಚಂದ್ರಶೇಖರಯ್ಯ ಗುರುವಿನಮಠ,ಚನ್ನಪ್ಪ ಜಾಲಿಹಾಳ, ಶಂಬಣ್ಣ ಡಂಬಳ, ಆನಂದ್ ಜವಾನರ, ಮಹಾಂತೇಶ್ ಗೋಧಿ, ಅಮರೇಶ್ ಕೊಡಕೇರಿ,ಶರಣಯ್ಯ ಮಠ ರುದ್ರಪ್ಪ ಶೀಲವಂತರ, ಮಲ್ಲಪ್ಪ ಪೋತನಾಳ, ದೊಡ್ಡಪ್ಪ ಹುಜರತಿ,ರವಿಕುಮಾರ್ ಕಂಠಿ, ಅಮಾತೆಪ್ಪ ಯರದಾಳ, ಸಜ್ಜಲಶ್ರೀ ಶಾಲೆಯ ಗುರುಗಳು ವಿಧ್ಯಾರ್ಥಿಗಳು ಹಾಗೂ ಅಪಾರ ಪ್ರಮಾಣದಲ್ಲಿ ಸದ್ಭಕ್ತರು ಕಂದಗಲ್ಲ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡು ಬೀಳ್ಕೊಟ್ಟರು ರಾಮಾತ್ನಾಳ, ಮೂದೇನೂರ, ಮಾದಾಪುರ, ಮುಖಾಂತರ ಸುಕ್ಷೇತ್ರ ಗುಡುದೂರ ತಲುಪಲಿರುವ ಯಾತ್ರೆಯಲ್ಲಿ ಸಾಗುವ ಪಾದಯಾತ್ರೆಗಳಿಗೆ ಕಂದಗಲ್ಲ ಗ್ರಾಮದಲ್ಲಿ ಉಪಹಾರ ವ್ಯವಸ್ಥೆ ಮಾಡಿದ್ದರು.
ವರದಿ : ದಾವಲ್ ಶೇಡಂ




