ಕಲಘಟಗಿ : ತಾಲೂಕಿನ ಕಾಮದೇನು ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಜಾನಪದ ಕಲಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.25.08.2024ರಂದು ಹಲವಾರು ಕಲಾತಂಡ ಸಾಮಾಜಿಕ ಮತ್ತು ನಾಟಕ ಪೌರಾಣಿಕ ಕಾರ್ಯಕ್ರಮಗಳು ಈ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ಯಶಸ್ವಿಯಾದವು ,
ಈ ಕಾರ್ಯಕ್ರಮದಲ್ಲಿ ಹನ್ನೆರಡು ಮಠದ ಷ.ಬ್ರ. ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಶಿಸಿ ಹೋಗುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸುವಲ್ಲಿ ಕ್ರಿಯಾಶೀಲರಾಗಿರುವ ಎಲ್ಲ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಲಾತಂಡದವರಿಗೆ ಸನ್ಮಾನಿಸಿ ಸತ್ಕರಿಸಿರುವದು ಪ್ರಸ್ತುತ ಅವಶ್ಯವಿದೆ ಎಂದರು,
ಜಾನಪದ ವಿದ್ವಾಂಸ ಮಲ್ಲಯ್ಯ ಸ್ವಾಮಿ ತೋಟಗಂಟಿ ಮಾತನಾಡಿ ತೊಟ್ಟಿಲು ನಾಡಲ್ಲಿ ಜಾನಪದ ತೂಗುತ್ತಿರುವ ತೊಟ್ಟಿಲು ಎಂದರೆ ನಮ್ಮ ನಿಂಗಪ್ಪ ದೊಡ್ಡ ಪೂಜಾರ ಇವರು ಸಾಧನೆ ಸುಮಾರು 20 ವರ್ಷ ನಿರಂತರವಾಗಿ ಜಾನಪದ ಸೇವೆಯಲ್ಲಿ ತೊಡಗಿದ್ದಾರೆ ಮೇಲಾಗಿ ಇವರೇ ಸ್ವತಃ ಜಾನಪದ ಕಲಾವಿದರಾಗಿದ್ದು ಈ ನಾಡಿನ ಈ ತಾಲೂಕಿನ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಇವರ ಸಾಧನೆಗೆ ಯಾವತ್ತು ನಾವು ಸಹಕಾರ ನೀಡುತ್ತೇವೆ,
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಸೋಮಣ್ಣ ಬೆನ್ನೂರ , ಐ ಸಿ ಗೋಕುಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ಮುರಳಿ.ಹಾಗೂ ಕಾಂಗ್ರೆಸ್ ಮುಖಂಡರು ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ್,
ಕನ್ನಡ ಸಾಹಿತ್ಯ ಪರಿಷತ್ತಿನ ಈಶ್ವರ ಜವಳಿ, ಶಿವಕಲ್ಲಪ್ಪ ಬಾಗಲಕೋಟೆ , ವಕೀಲರಾದ ರವಿ ತೋಟಗಂಟೆ , ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋಮಲಿಂಗ ಒಡೆಯರ. ಕಲಾವಿದ ಹೆಚ್ ಏನ್ ಸುನಗದ, ಕುಸ್ತಿ ಕೇಸರಿ ಬಸವಣ್ಣಪ್ಪ ದೊಡ್ಡಬೂಜಾರ, ಗಾಯಕೀಯರಾದ ಫಕೀರವ್ವ ಉಳ್ಳಾಗಡ್ಡಿ, ಪ್ರಿಯಾಂಕಾ ಎಮ್ಮೆಟ್ಟಿ, ಕವಿತಾ ಸಂಕನಗೌಡ್ರ,ಕರ್ನಾಟಕ ಸಂಗ್ರಾಮ ಸೇನೆಯ ಅಧ್ಯಕ್ಷ ಸಾತಪ್ಪ ಕುಂಕೂರ, ಮಂಜುನಾಥ ಕಿಲ್ಲಿಕೇತರ, ಮಂಜುನಾಥ ಗಂಜಿಗಟ್ಟಿ, ಬಸವರಾಜ ಕಡ್ಲೆನ್ನವರ, ಹಾಗೂ ಗ್ರಾಮದ ಎಲ್ಲಾ ಗುರುಹಿರಿಯರು ಹಾಗೂ ಅನೇಕ ಸಂಘ ಸಂಸ್ಥೆಯ ಪದಾಧಿಕಾರಿಗಳು , ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳು , ಪತ್ರಕರ್ತರು, ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಊರಿನ ಕಿರಿಯ ಹಿರಿಯ ಹಾಗೂ ಹಲವಾರು ಕಲಾ ತಂಡಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ನಿತೀಶಗೌಡ ತಡಸ ಪಾಟೀಲ್