ಹುಕ್ಕೇರಿ :- ಚಿಕ್ಕೋಡಿ ಲೋಕ್ ಸಭೆ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರವಾಗಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಸಭೆ ನಡೆಸಲಾಯಿತು.
ಪತ್ರಿಕಾ ಮಾಧ್ಯಮಗಳೊಂದಿಗೆ ಸಭೆಯನ್ನು ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಲಾಯಿತು.
ರಾಜ್ಯದ ಶೋಷಿತ ಸಮುದಾಯ ಮುಖಂಡರು ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ಸಭೆ ನಡೆಸಲಾಯಿತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಬೆಂಬಲಿಸಬೇಕು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ತರಬೇಕೆಂದು ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಅತೀ ಹೆಚ್ಚು ಬೆಂಬಲವನ್ನು ನೀಡಿದರೆ ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು ಹಾಗೂ ದಲಿತರು ನಾವು ಎಲ್ಲರೂ ಒಟ್ಟಾಗಿ ಬೆಂಬಲವನ್ನು ನೀಡಿದರೆ ಮಾತ್ರ ಈ ಒಳ್ಳೆ ಮಾರ್ಗ ಸಿಗುತ್ತದೆ ನಾಯಕ ಎಂದರೆ ಅದು ಸಚಿವರಾದ ಜಾರಕಿಹೊಳಿಯವರು ಎಲ್ಲ ಸಮುದಾಯಗಳಿಗೆ ನ್ಯಾಯವನ್ನು ಒದಿಗಿಸಿಕೊಳ್ಳುವವರು ಇವರು ಎಂದು ಎಸಿ. ಎಸ್. ಟಿ. ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಮಾಜಿ ಸದಸ್ಯರಾದ ಸುರೇಶ ತಳವಾರ ಮಧ್ಯಮದೊಂದಿಗೆ ಹೇಳಲಾಯಿತು.
ಈ ಸಂದರ್ಭದಲ್ಲಿ ಡಿ. ಎಸ್. ಎಸ್. ಸಂಚಾಲಕರಾದ ಮಾವಳಿ ಶಂಕರ್, ಅನಂತ್ ನಾಯ್ಕ್, ರಮೇಶ್ ತಳವಾರ, ಸದಾನಂದ ಕಾಂಬಳೆ, ಚಂದ್ರು ಚಲವಾದಿ, ಅಪ್ಪಣ್ಣ ಖಾತೆದಾರ್, ಮರಿನಾಯ್ಕ್ ವಕೀಲರು, ಸಂತೋಷ ಘಸ್ತಿ, ಅಕ್ಷಯ್ ವಿರಮಟ್, ಬಸವರಾಜ್ ಬಿಸಲಗುಂದಿ, ಸುಬ್ರಮಣ್ಯ ಹಾಗೂ ಅನೇಕ ರಾಜ್ಯದ ದಲಿತ ಮುಖಂಡರು ಹಾಗೂ ಹುಕ್ಕೇರಿ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ