ಹುಕ್ಕೇರಿ ಹಿಟ್ನಿ ಗ್ರಾಮದ ಯೋಧ 22 ವರ್ಷ ನಮ್ಮ ದೇಶದ ಯೋಧನಾಗಿ ಸೇವೆ ಸಲ್ಲಿಸಿ ಮರಳಿದಕ್ಷಣ
ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಗ್ರಾಮದ ಸುಪುತ್ರನಾದ ಯೋಧ ಯಮಾಜಿ ಬಿವಾ ಪೂಜಾರಿ (CORPS OF EME) ಭಾರತೀಯ ಸೈನ್ಯದಲ್ಲಿ 15 ಮಾರ್ಚ್ 2004 ರಲ್ಲಿ ಸೇರ್ಪಡೆಗೊಂಡು 31 ಮಾರ್ಚ್ 2026 ರವರಿಗೆ 22 ವರ್ಷಗಳ ಕಾಲ ದೇಶದ ಸೇವೆಯನ್ನ ಪೂರ್ಣಗೊಳಿಸಿ ನಿವೃತ್ತಿ ಹೊಂದಿ ಮನೆಗೆ ಮರ್ಯಾದೆ ಕ್ಷಣ.
ಈ ಹುದ್ದೆಯಿಂದ ನಿವೃತ್ತಿ ಹೊಂದಿದ್ದು ಸೇವಾನಿವೃತ್ತಿ ಕಾರ್ಯಕ್ರಮವನ್ನು ಗ್ರಾಮಸ್ಥರು ಹಾಗೂ ಸಂಬಂಧಿಕರೊಂದಿಗೆ ಅಲ್ಲದೆ ಮಾಜಿ ಹಾಜಿ ಸೈನಿಕರೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಇವತ್ತು ಬೆಳಿಗ್ಗೆ ನಿಪ್ಪಾಣಿ ನಗರಸಭೆಯ ಆವರಣದಲ್ಲಿರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆಯನ್ನು ಕುಟುಂಬದ ಸಮೇತ ನೆರವೇರಿಸಿದರು ನಂತರ ನಿಪ್ಪಾಣಿ ನಗರದ ಮಧ್ಯದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಕುಟುಂಬದ ಸದಸ್ಯರೊಂದಿಗೆ ಹಾಗೂ ನಿವೃತ್ತಿ ಹೊಂದಿದ ಸೈನಿಕರೊಂದಿಗೆ ಮಾಲಾರ್ಪಣೆ ನೆರವೇರಿಸಿ ನಂತರ ಸ್ವ ಗ್ರಾಮಕ್ಕೆ ಗ್ರಾಮ ದೇವರ ದರ್ಶನ ಪಡೆಯಲು ತೆರೆದು ವಾಹನದಲ್ಲಿ ಹಿಟನಿ ಗ್ರಾಮಕ್ಕೆ ತೆರಳಿ ಶ್ರೀ ಮಸೊಬಾ ದೇವರ ದರ್ಶನವನ್ನು ಪಡೆದರು .
ಈ ಸುಂದರ ಕ್ಷಣವನ್ನು ಗ್ರಾಮದ ಹಿರಿಯರು ಮುಖಂಡರು ಯುವಕರು ಮಹಿಳೆಯರು ಸೇರಿದಂತೆ ಊರಿನ ಸಮಸ್ತ ನಾಗರಿಕರು ನಾಯಕ್ ಯಮಾಜಿ ಬಿವಾ ಪೂಜಾರಿ ಇವರನ್ನು ಅದ್ದೂರಿಯಾಗಿ ಸ್ವಾಗತಿಸಲು ಡೊಳ್ಳು ಕೋಲು ಬಾರಿಸುತ್ತಾ ಹಾಗೂ ಹೂವಿನ ಸುರುಮಳೆಯನ್ನು ಗೈದರು ಅಲ್ಲದೆ ಮಂದಿರದ ಮುಂಭಾಗದಲ್ಲಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು ಇದಾದ ನಂತರ ಹಲವಾರು ಜನರಿಂದ ಪುಷ್ಪ ಶಾಲು ಹೂ ಗುಚ್ಛ ನೀಡಿ ಗೌರವಿಸಿ ಆಶೀರ್ವದಿಸಿದರು ನಂತರ ಶ್ರೀ ಮಸೋಬಾ ಮಂದಿರದಿಂದ ಊರಿನ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಿದರು ಈ ಸಂದರ್ಭದಲ್ಲಿ ಊರಿನ ಜನರು ಪ್ರತಿಯೊಬ್ಬರ ಬಾಗಿಲು ಮುಂದೆ ಅವರನ್ನು ಬರಮಾಡಿಕೊಂಡು ನೀರು ಕೊಟ್ಟು ಸಕ್ಕರೆ ತಿನ್ನಿಸಿ ಆರತಿ ಬೆಳಗಿ ಗ್ರಾಮಕ್ಕೆ ಬರಮಾಡಿಕೊಂಡರು ಹೀಗೆ ಮುಂದುವರೆದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ನೂರಾರು ಜನರೊಂದಿಗೆ ಆಗಮಿಸಿ ಹಿರಿಯರ ಸಮ್ಮುಖದಲ್ಲಿ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಗವಾನ್ ಗೌತಮ್ ಬುದ್ಧ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಸವೇಶ್ವರ ಮಹಾರಾಜ, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮಫುಲೆ, ಸಾವಿತ್ರಿಬಾಯಿ, ಅಣ್ಣಾಬಾಹು ಸಾಟೆ ಮಹಾ ಪುರುಷರ ಫೋಟೋಗಳಿಗೆ ಹೂ ಹಾರ ಹಾಕಿ ಪುಷ್ಪ ಗೌರವವನ್ನು ಅರ್ಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅವರ ಗುರುಗಳು ಹಾಗೂ ಹಿರಿಯ ಮಾಜಿ ಸೈನಿಕರು, ಸಂಬಂಧಿಕರು, ವಿವಿಧ ಸಂಘಟನೆಗಳ ಮುಖಂಡರು, ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ಊರಿನ ಗಣ್ಯಮಾನ್ಯರಿಂದ ಸತ್ಕಾರ ಸಮಾರಂಭ ನೆರವೇರಿತು, ನಂತರ ಹಾಜಿ ಮಾಜಿ ಸೈನಿಕರ ಸಂಘಟನೆ ವತಿಯಿಂದ ಸತ್ಕಾರವನ್ನು ಸ್ವೀಕರಿಸಿ ನಿವೃತ್ತ ಸೈನಿಕ ನಾಯಕ್ ಯಮಾಜಿ ಬಿವಾ ಪೂಜಾರಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ತಮಗೆ ಸತ್ಕರಿಸಿದ ಹಾಗೂ ಗೌರವಿಸಿದ ಪುಟಾಣಿಗಳಿಗೂ ಸೇರಿದಂತೆ ಗ್ರಾಮಸ್ಥರಿಗೂ, ಹಾಜಿ ಮಾಜಿ ಸೈನಿಕರಿಗೂ, ಸಂಬಂಧಿಕರಿಗೂ, ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಾಳು ಪೂಜಾರಿ, ಯುವರಾಜ ಪಾಟೀಲ್, ಬಾಳಾಸಾಹೇಬ್ ಪಾಟೀಲ್, ಅಪ್ಪಾ ಪೂಜಾರಿ, ಸಚಿನ್ ಪೂಜಾರಿ ನಾರಾಯಣ ದಳವಿ, ರಮೇಶ್ ಬಿ ಟೋಪರೆ, ಸರೋಜ ಟೋಪರೆ, ಅವರ ಹಿತೈಷಿಗಳು, ಗ್ರಾಮಸ್ಥರು ಸರ್ವ ಕುಟುಂಬದ ಸದಸ್ಯರು, ಗೆಳೆಯರ ಬಳಗ, ಪುಟಾಣಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




