ಮಾನ್ವಿ ತಾಲೂಕಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ
ವಾಸವಿ ಕಲ್ಯಾಣ ಮಂಟಪದಲ್ಲಿ ಸಹಸ್ರಾರು ಕನ್ನಡಾಭಿಮಾನಿಗಳು ಭಾಗಿ
ಶಾಸಕ ಹಂಪಯ್ಯ ನಾಯಕ ಸೇರಿದಂತೆ ಗಣ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ
ಬಸವ ವೃತ್ತದಿಂದ ನಡೆದ ಸಮ್ಮೇಳನಾಧ್ಯಕ್ಷ ರಮೇಶಬಾಬು ಯಾಳಗಿಯ ಮೆರವಣಿಗೆ
ಸಮಾಜ ಸೇವಕರಿಗೆ ಕಸಾಪದಿಂದ ಸನ್ಮಾನ
ಮಾನ್ವಿ: ತಾಲೂಕಲ್ಲಿ ನಡೆದ 10ನೆ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕಾರಣಿಗಳು, ಕನ್ನಡಾಭಿಮಾನಿಗಳು ಹಾಗು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅದ್ಧೂರಿಯಾಗಿ ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ 10ನೆ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ರಮೇಶಬಾಬು ಯಾಳಗಿ ಮಾತನಾಡಿ, ತಾಯಿಯ ಬಗ್ಗೆ ಪುಸ್ತಕದ ಮೂಲಕ ಕವಿತೆ ಬರೆದರೇನಂತೆ, ಮುಪ್ಪಾದ ಸಮಯದಲ್ಲಿ ತಾಯಿಯನ್ನು ನೋಡಿಕೊಳ್ಳುವ ಕೆಲಸ ಮಾಡಬೇಕು ಎಂದು ಕನ್ನಡಾಭಿಮಾನಿಗಳಿಗೆ ತಿಳಿ ಹೇಳಿದರು.

ಶಿಕ್ಷಣ ನಮಗೆ ದಾರಿ ತೋರಿಸುತ್ತದೆ.ಆದರೆ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಬಗ್ಗೆ ತಿಳಿ ಹೇಳಿದಾಗ ಮಾತ್ರ ಬದಲಾವಣೆಯಾಗಲು ಸಾಧ್ಯ. ಇಲ್ಲವೆಂದರೆ ಆಪತ್ತಿನಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದರು.
ನಾನು ಬಾಲ್ಯದ ಸಮಯದಲ್ಲಿ ಬಡತನದ ನಡುವೆ ಕಷ್ಟಪಟ್ಟು ಶಿಕ್ಷಣ ಪಡೆದಿದ್ದೇನೆಂದರೆ.ನಮ್ಮ ತಾಯಿ,ಅಪ್ಪ ಮತ್ತು ನನ್ನ ಅಣ್ಣಂದಿರು ಸಹಕಾರ ನೀಡಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಕುಟುಂಬದ ನೆನಪನ್ನು ವೇದಿಕೆಯಲ್ಲಿ ಪ್ರಚುರಪಡಿಸಿದರು.
ವರದಿ :ಶಿವ ತೇಜ




