ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೆ ‘ಯಾಂತ್ರಿಕವಾಗಿ’ ಎಫ್ಐಆರ್ (FIR) ದಾಖಲಿಸುವುದನ್ನು ತಡೆಯಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣ ದೂರುಗಳ ವಿಷಯದಲ್ಲಿ ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
ದೂರುದಾರರಅರ್ಹತೆ (Locus Standi): ಮಾನಹಾನಿ ಅಥವಾ ಅಂತಹ ಪ್ರಕರಣಗಳಲ್ಲಿ ದೂರು ನೀಡುವವರು ಸ್ವತಃ “ನೊಂದ ವ್ಯಕ್ತಿ” ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳು ನೀಡುವ ದೂರುಗಳ ಮೇಲೆ ಎಫ್ಐಆರ್ ದಾಖಲಿಸುವಂತಿಲ್ಲ (ಗಂಭೀರ ಅಪರಾಧಗಳನ್ನು ಹೊರತುಪಡಿಸಿ).
ಪ್ರಾಥಮಿಕವಿಚಾರಣೆಕಡ್ಡಾಯ: ದೂರು ಬಂದ ಕೂಡಲೇ ಎಫ್ಐಆರ್ ದಾಖಲಿಸುವ ಬದಲು, ಆ ಪೋಸ್ಟ್ನಲ್ಲಿ ಕಾನೂನುಬದ್ಧವಾಗಿ ಅಪರಾಧ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೊದಲು ಪ್ರಾಥಮಿಕ ತನಿಖೆ ನಡೆಸಬೇಕು.
ಅಭಿವ್ಯಕ್ತಿಸ್ವಾತಂತ್ರ್ಯದರಕ್ಷಣೆ: ಕೇವಲ ಕಟುವಾದ ಅಥವಾ ಆಕ್ಷೇಪಾರ್ಹ ರಾಜಕೀಯ ಭಾಷಣಗಳಿಗಾಗಿ ಪ್ರಕರಣ ದಾಖಲಿಸಬಾರದು. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಸ್ಪಷ್ಟ ಅಂಶಗಳಿದ್ದರೆ ಮಾತ್ರ ಕ್ರಮ ಕೈಗೊಳ್ಳಬೇಕು.
ಮಾನಹಾನಿಪ್ರಕರಣಗಳು: ಮಾನಹಾನಿ ಪ್ರಕರಣವು ಅಸಂಜ್ಞೇಯ (Non-cognizable) ಅಪರಾಧವಾಗಿರುವುದರಿಂದ, ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸುವಂತಿಲ್ಲ. ದೂರುದಾರರನ್ನು ನ್ಯಾಯಾಲಯಕ್ಕೆ (ಮ್ಯಾಜಿಸ್ಟ್ರೇಟ್) ಹೋಗಲು ಸೂಚಿಸಬೇಕು.
ಕಾನೂನುಸಲಹೆ: ಸೂಕ್ಷ್ಮ ವಿಷಯಗಳಲ್ಲಿ ಅಥವಾ ರಾಜಕೀಯ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವ ಮೊದಲು ಸರ್ಕಾರಿ ಅಭಿಯೋಜಕರಿಂದ (Public Prosecutor) ಕಾನೂನು ಅಭಿಪ್ರಾಯ ಪಡೆಯುವುದು ಕಡ್ಡಾಯ.
ಬಂಧನಕ್ಕೆನಿರ್ಬಂಧ: ಸುಪ್ರೀಂ ಕೋರ್ಟ್ನ ‘ಅರ್ನೇಶ್ ಕುಮಾರ್’ ತೀರ್ಪಿನಂತೆ, ಅನಿವಾರ್ಯವಲ್ಲದ ಸಂದರ್ಭಗಳಲ್ಲಿ ಅಥವಾ ಸಣ್ಣಪುಟ್ಟ ಕಾರಣಗಳಿಗಾಗಿ ಯಾರನ್ನೂ ಏಕಾಏಕಿ ಬಂಧಿಸುವಂತಿಲ್ಲ.
ದುರುದ್ದೇಶಪೂರಿತದೂರುಗಳು: ದೂರುಗಳು ರಾಜಕೀಯ ಪ್ರೇರಿತ ಅಥವಾ ವಿನಾಕಾರಣ ನೀಡಿದ್ದು ಎಂದು ಕಂಡುಬಂದಲ್ಲಿ, ಅವುಗಳನ್ನು ತಕ್ಷಣವೇ ವಜಾಗೊಳಿಸಬೇಕು (BNSS ಸೆಕ್ಷನ್ 176(1) ಅಡಿಯಲ್ಲಿ).
ಯಾರಿಗೆ ಅನ್ವಯ?
ಈ ಆದೇಶವು ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ಐಜಿಪಿಗಳು ಮತ್ತು ಎಸ್ಪಿಗಳಿಗೆ ಅನ್ವಯವಾಗಲಿದ್ದು, ತಳಮಟ್ಟದ ಸಿಬ್ಬಂದಿಗೂ ಇದನ್ನು ತಲುಪಿಸಲು ಸೂಚಿಸಲಾಗಿದೆ.




