ರಾಯಬಾಗ : ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುವ ಮೇಕೆಗಳ ಸಂತೆ ಮುಖ್ಯ ರಸ್ತೆಯ ಮೇಲೆ ಇರುವುದರಿಂದ ಸಂಚಾರಿಕರಿಗೆ ದೊಡ್ಡ ತಲೆ ನೋವಾಗಿದ್ದು ಈ ವಿಷಯ ಕುರಿತು ನಿನ್ನೆ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ ಹಾಗೂ ತಹಸೀಲ್ದಾರಾದ ಮುಂಜೆ ಇವರು ಮೇಕೆಗಳ ಸಂಖ್ಯೆಯನ್ನು ಅತಿ ಶೀಘ್ರದಲ್ಲಿ ಸ್ಥಳಾಂತರಗೊಳಿಸಲು ಯೋಚನೆ ಮಾಡಲಾಯಿತು.
ರಾಯಬಾಗ್ ಮೇಕೆಗಳ ಸಂತೆ ಕರ್ನಾಟಕದಲ್ಲಿ ಇದು ಒಂದು ದೊಡ್ಡ ಸಂತೆಯಾಗುವದರಿಂದ ಎಲ್ಲಾ ಮೇಕೆಗಳನ್ನು ತರುವ ವಾಹನಗಳು ಹಾಗೂ ಮೇಕೆಗಳನ್ನು ಖರೀದಿಸಲು ಬಂದಿರುವ ವಾಹನಗಳು ಮುಖ್ಯ ರಸ್ತೆಯ ಮೇಲೆಯೇ ಈ ಸಂತೆ ಪ್ರತಿವಾರ ಕೊಡುವ ಕಾರಣ ಹೋಗು ಬರುವ ಸಂಚಾರಿಕರಿಗೆ ದೊಡ್ಡ ತೊಂದರೆ ಹಾಗೂ ತಲೆ ನೋವಾಗಿತ್ತು.
ಅದು ನಿನ್ನೆ ಕೆ ಡಿ ಪಿ ಸಭಾ ಗ್ರಹದಲ್ಲಿ ಮಾನ್ಯ ಶಾಸಕರು ಹಾಗೂ ತಹಶೀಲ್ದಾರ್ ಇವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಈ ಮೇಕೆಗಳ ಸಂಖ್ಯೆಯನ್ನು ಸ್ಥಳಾಂತರಗೊಳಿಸಿ, ಜನರಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದು ಹೇಳಿದ್ದಾರೆ ಇದು ಈಗ ಕಾದು ನೋಡಬೇಕಾಗಿದೆ ಯಾವಾಗ ಈ ಸಂತೆ ಬಯಲು ಪ್ರದೇಶದಲ್ಲಿ ಸ್ಥಳಾಂತರ ಗೊಳ್ಳುತ್ತದೆ ಎನ್ನುವುದನ್ನು.
ವರದಿ : ರಾಜು ಮುಂಡೆ




