ಮುದಗಲ್ಲ : ತೆಲಂಗಾಣ ರಾಜ್ಯದ ಮಹಬೂಬ್ ನಗರದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಪಘಾತದಲ್ಲಿ ನಿಧನರಾದ ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರಾದ ಬಿ.ಎ.ನಂದಿಕೋಲಮಠ ಅವರಿಗೆ ಮುದಗಲ್ಲ ಪತ್ರಕರ್ತರ ಬಳಗದ ವತಿಯಿಂದ ಪ್ರಭು ಸ್ವಾಮಿಯವರ ಆಫೀಸ್ ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಂತರ ಹಿರಿಯ ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆ ಅವರು ಈ ಸಂದರ್ಭದಲ್ಲಿ ಮಾತನಾಡಿದರು ಇಂದು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಜೊತೆಗೆ ಪತ್ರಿಕಾ ರಂಗವು ಬಡವಾಗಿದೆ. ಪತ್ರಕರ್ತರಿಗೆ ಹಾಗೂ ಸಾರ್ವಜನಿಕರುಗೆ ಬರ ಸಿಡಿಲು ಬಡಿದಂತಾಗಿದೆ ಬಿ.ಎ.ನಂದಿಕೋಲಮಠ ಅವರು ಸಾಮಾಜಿಕ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು ಕಿರಿಯ ಪತ್ರಕರ್ತರಿಗೆ ತೋರುವ ಮಾರ್ಗದರ್ಶನ ನೆನೆದು ಭಾವುಕರಾದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಆನೆಹೊಸೂರ ಶರಣಪ್ಪ ಮಾತನಾಡಿ ನಮ್ಮನ್ನು ಬಿಟ್ಟು ಅಗಲಿದ ನಂದಿಕೋಲ ಮಠ ಹಾಗೂ ನಾವು ಒಂದೇ ಕುಟುಂಬದವರಂತೆ ಇದ್ದೆವು. ದ್ವೇಷದ ಮಾತು ಕೂಡ ಅವರಲ್ಲಿ ಇರಲಿಲ್ಲ. ಅವರ ವ್ಯಕ್ತಿತ್ವ, ಜೀವನ ನೇರವಾಗಿತ್ತು. ಅಗಲಿರುವ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಹಿರಿಯ ಪತ್ರಕರ್ತ ಅನಂತ್ ರಾವ್ ದೇಶಪಾಂಡೆ ಮಾತನಾಡಿದರು.
ಈ ವೇಳೆ ಪತ್ರಕರ್ತರಾದ ಚಂದ್ರಶೇಖರ ಗಂಗಾವತಿ, ಶರಣಯ್ಯ ಒಡೆಯರ್, ದೇವಣ್ಣ ಕೋಡಿಹಾಳ್, ಶಿವರಾಜ ಸುಂಕದ, ಬಸವರಾಜ ನಾಯಕ ಹುನೂರ್, ಪ್ರಭು ಸ್ವಾಮಿ, ಹನುಮಂತ ನಾಯಕ್, ಶಶಿಧರ್ ಕಂಚಿಮಠ, ಅಮ್ಜದ್ ಸಾಬ್ ಕಂದಗಲ್, ವಾಹಿದ್ ಖುರೇಷಿ, ಬಸವರಾಜ ನಾಯಕ ಆಶಿಹಾಳ್, ಕೆ.ವಿ ಸುರೇಶ, ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ