ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮ ಕ್ರಾಂತಿವೀರ ಯುವ ಬ್ರಿಗೇಡ್ ವೇದಿಕೆಯ ಸಿದ್ಧತೆ ವೀಕ್ಷಣೆ ಮಾಡಿದ ಕಲ್ಲು ಸೊನ್ನದ್. ಮತ್ತು ಆನಂದ್ ದೇವರು.
ಕ್ರಾಂತಿವೀರ ಯುವ ಬ್ರಿಗೇಡ್ ಎಂಬ ಕಾರ್ಯಕ್ರಮವು ಬಸವನ ಬಾಗೇವಾಡಿ ಪಟ್ಟಣದ ಮಿನಿವಿಧಾನಸೌಧ ಹಿಂದುಗಡೆ ರಾಜ್ಯಮಟ್ಟದ ಕಾರ್ಯಕ್ರಮ ಫೆಬ್ರುವರಿ 4 ರಂದು ಜರುಗಲಿದೆ
12ನೇ ಶತಮಾನದ ಅಣ್ಣ ಬಸವಣ್ಣನವರೂ ಎಲ್ಲರನ್ನು ಕರೆದುಕೊಂಡು ಅನುಭವ ಮಂಟಪ ಎಂಬ ಹೆಜ್ಜೆಯನಿಟ್ಟು ಎಲ್ಲರೂ ಸರಿ ಸಮಾನರೆಂಬ ಸಂದೇಶ ಸಾರಿದ ಬಸವಣ್ಣನವರ ಜನ್ಮಸ್ಥಳದ ಬಸವನ ಬಾಗೇವಾಡಿಯಲ್ಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯಾದ ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಚಿಕ್ಕ ಚಿಕ್ಕ ಸಮುದಾಯಗಳನ್ನು ಸೇರಿಸಿಕೊಂಡು ಕ್ರಾಂತಿವೀರ ಯುವ ಬ್ರಿಗೇಡ್ ಎಂಬ ಕಾರ್ಯಕ್ರಮವು 1008 ಜನ ಸ್ವಾಮೀಜಿಗಳನ್ನು ಸೇರಿಸಿಕೊಂಡು ಬಸವ ಸ್ಮಾರಕದಿಂದ ಕುಂಭಮೇಳ ಹಲವಾರು ಕಲಾತಂಡಗಳಿಂದ ಮೆರವಣಿಗೆ ಮಾಡುವುದರ ಮೂಲಕ ಕ್ರಾಂತಿಕಾರಿ ಯುವ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ
ಕ್ರಾಂತಿವೀರ ಯುವ ಬ್ರಿಗೇಡ್ ಮೂಲಕ ಅನ್ಯಾಯಕ್ಕೆ ಒಳಗಾದವರನ್ನು ನ್ಯಾಯ ಕೊಡಿಸುವುದು ಕಡು ಬಡವರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಹೋರಾಟ ಮಾಡುವುದರ ಮೂಲಕ ನ್ಯಾಯ ಕೊಡಿಸುವುದಕ್ಕೆ ಕ್ರಾಂತಿವೀರ ಯುವ ಬ್ರಿಗೇಡ್ ಇರುತ್ತದೆ ಎಂದು ಕಲ್ಲು ಸೊನ್ನದ್ ಹೇಳಿದರು
ಬಸವನ ಬಾಗೇವಾಡಿಯಲ್ಲಿ ಕಾರ್ಯಕ್ರಮ ಮಾಡುವುದರ ಉದ್ದೇಶವೇನೆಂದರೆ ಅಣ್ಣ ಬಸವಣ್ಣವರು ಹುಟ್ಟಿದ ಸ್ಥಳ ನಾವು ಮಾಡುವ ಕಾರ್ಯಕ್ರಮ ಇಡೀ ರಾಜ್ಯದ ತುಂಬಾ ಹರಡಲಿ ಮತ್ತು ಬಸವನ ಬಾಗೇವಾಡಿಯ ಸುತ್ತಮುತ್ತಲಿನ ಹಳ್ಳಿಯ ಜನರು ಪಾಲ್ಗೊಳ್ಳಲಿದ್ದು ಸುಮಾರು ನಾಲ್ಕು ಜಿಲ್ಲೆಗಳ ಜನರು ಭಾಗಿಯಾಗಲಿದ್ದಾರೆ ಆನಂದ್ ದೇವರು ಮತ್ತು ಕಲ್ಲು ಸೊನ್ನದ್ ಹೇಳಿದರು
ಇದೇ ಸಂದರ್ಭದಲ್ಲಿ ಕಲ್ಲು ಸೊನ್ನದ್ ಆನಂದ್ ದೇವರು. ಬಸವರಾಜ್ ಬಿಜಾಪುರ್. ಮುದುಕಣ್ಣ ಹೊರ್ತಿ. ರಾಜು ಮುಳುವಾಡ. ಶಿವರಾಯ್ ಕಲಬುರ್ಗಿ. ಸಂಗಣ್ಣ ಹಂಚನಾಳ ವಿಶಾಲ್ ಮುತ್ತತ್ತಿ . ಬಸವರಾಜ ಅಡಿಗಿಮನಿ
ಹೀಗೆ ಉಪಸ್ಥಿತರು ವೀಕ್ಷಣೆ ಮಾಡಿದರು