Ad imageAd image

ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್‌ 

Bharath Vaibhav
ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್‌ 
WhatsApp Group Join Now
Telegram Group Join Now

ಬೆಂಗಳೂರು: ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್‌ ಆಗುತ್ತಿದೆ. ಮುನಿರತ್ನ ಗೋದಾಮಿನಲ್ಲೇ ಈ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದ್ದು, ಮುನಿರತ್ನ ತನ್ನ ಕಚೇರಿಯಲ್ಲಿ ಕುಳಿತು ಲೈವ್ ನೋಡುತ್ತಿದ್ದರು ಎನ್ನಲಾಗಿದೆ.

ಸದ್ಯ ಕಾರ್ಪೊರೇಟರ್ ಪತ್ನಿಯ ಹನಿಟ್ರ್ಯಾಪ್ ವೀಡಿಯೊ ಎನ್ನಲಾಗ್ತಿರೋ ವೀಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಈ ನಡುವೆ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ದ ಮಹಿಳೆಯೊಬ್ಬರು 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿ ಹನಿಟ್ರ್ಯಾಪ್ ಗೆ ಬಳಸಿಕೊಂಡಿರುವ ಕುರಿತು ದೂರು ನೀಡಿದ್ದಾರೆ.

ಈ ಸಂಬಂಧ ಕೃತ್ಯ ನಡೆದ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬುಧವಾರ ತಡರಾತ್ರಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ಮುನಿರತ್ನ ಆತನ ಗನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿದಂಕೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!