Ad imageAd image

ಅರಣ್ಯವಾಸಿಗಳಿಂದ ಬೃಹತ್ “ಕಾರವಾರ ಚಲೋ

Bharath Vaibhav
ಅರಣ್ಯವಾಸಿಗಳಿಂದ ಬೃಹತ್ “ಕಾರವಾರ ಚಲೋ
WhatsApp Group Join Now
Telegram Group Join Now

——————————————ಮನೆಗೊಬ್ಬರಂತೆ ಭಾಗವಹಿಸಿ- ರವೀಂದ್ರ ನಾಯ್ಕ

ಜೋಯಿಡಾ: ಮುಂಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಡಿ. ೬ ರಂದು `ಜಿಲ್ಲಾಮಟ್ಟದ ಬೃಹತ್ ಕಾರವಾರ ಚಲೋ’ ಸಂಘಟಿಸಿದ್ದು, ಅರಣ್ಯವಾಸಿಗಳು ಮನೆಗೊಬ್ಬರಂತೆ ಭಾಗವಹಿಸಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಜೋಯಿಡಾ ತಾಲೂಕಿನ ಕುಣಬಿ ಭವನದಲ್ಲಿ ಜರುಗಿದ ಅರಣ್ಯವಾಸಿಗಳ ಬೃಹತ್ ಸಭೆಯಲ್ಲಿ ಮಾತನಾಡುತಿದ್ದರು.
ಬೆಳಗಾವಿ ಚಳಿಗಾಲ ಅಧಿವೇಶನ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನ ಸೇಳೆಯುವುದು ಪ್ರತಿಯೊಬ್ಬ ಅರಣ್ಯವಾಸಿಯ ಕರ್ತವ್ಯ. ಈ ಹಿನ್ನಲೆಯಲ್ಲಿ ಹಮ್ಮಿಕೊಂಡ ಸಮಾವೇಶದಲ್ಲಿ ಸಕ್ರಿಯವಾಗಿ ಪ್ರತಿಯೊಬ್ಬ ಅರಣ್ಯವಾಸಿಗೂ ಮಾಹಿತಿ ನೀಡುವುದು. ಗ್ರೀನ್ ಕಾರ್ಡ ಪ್ರಮುಖರ ಜವಬ್ದಾರಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಸಾಂಘಿಕ ಹೋರಟದೊಂದಿಗೆ ಕಾನೂನಾತ್ಮಕ ಹೋರಾಟಕ್ಕೂ ಹೋರಾಟಗಾರರ ವೇದಿಕೆ ಸನ್ನಧ್ಧವಾಗಿದೆ. ಕಾನೂನಿನ ಕೊರತೆಯಿಂದ ಮತ್ತು ಕಾನೂನು ಜ್ಞಾನ ಇಲ್ಲದಿರುವುದರಿಂದ ಅರಣ್ಯವಾಸಿಗಳಿಗೆ ಸಮಸ್ಯೆಗಳು ಉಂಟಾಗುತ್ತಿದೆ. ಅರಣ್ಯವಾಸಿಗಳಿಗೆ ಕಾನೂನು ತಿಳುವಳಿಕೆ ಜ್ಞಾನದ ಜೊತೆಯಲ್ಲಿ ಜಾಗೃತ ಮೂಡಿಸುವ ಉದ್ದೇಶದಿಂದ ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಂದ್ರತೆ ಹೆಚ್ಚಿಗೆ ಇರುವಂತ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ ಸಂಘಟಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಸಂಚಾಲಕರಾದ ಸುಭಾಷ್ ಗೌಡ ಸ್ವಾಗತ ಮಾಡಿದರು ಎಮ್ ರಫೀಕ್ ಖಾನ್, ದೀಲಿಪ್ ಮಿರಾಶಿ, ಬಬಲಿ ಗಾಂವಕರ್, ರತ್ನಾಕರ್ ನಾಯ್ಕ, ಛಾಯಾ ಉಳವಿ, ಕೇಶವ ವರಕಟಕರ್, ರಮೇಶ್ ಜಿ ಗಾವಂಟಕರ್, ರಾಮದಾಸ್ ವೇಳಿಪ್, ಅಂತೋನ್ ಮುಂತಾದವರು ಉಪಸ್ಥಿತರಿದ್ದರು.

ಭೂಮಿ ಹಕ್ಕ ಅನಿವಾರ್ಯ
ಭೂ ರಹಿತರಾದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾದರೇ, ನಿರಾಶ್ರಿತರಾಗುವ ಪರಿಸ್ಥಿತಿ ಬರುವುದರಿಂದ ಭೂಮಿ ಹಕ್ಕು ಕೊಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯ ಪ್ರವ್ರತ್ತರಾಗಬೇಕು ಹಾಗೂ ಸರ್ಕಾರವು ಅರಣ್ಯವಾಸಿಗಳ ಪರವಾಗಿ ಕಾರ್ಯ ನಿರ್ವಹಸಬೇಕೆಂದು ಜಿಲ್ಲಾ ಸಂಚಾಲಕ ಮತ್ತು ಸಾಮಾಜಿಕ ಹೋರಾಟಗಾರರ ಸುಬಾಷ್ ಗಾವಡ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!