Ad imageAd image

ಅಸಹಜ ಲೈಂಗಿಕ ಕ್ರಿಯೆ ಒಪ್ಪದ ಹೆಂಡತಿ ಕೊಂದು ಆತ್ಮಹತ್ಯೆಗೆ ಶರಣಾದ ಗಂಡ

Bharath Vaibhav
ಅಸಹಜ ಲೈಂಗಿಕ ಕ್ರಿಯೆ ಒಪ್ಪದ ಹೆಂಡತಿ ಕೊಂದು ಆತ್ಮಹತ್ಯೆಗೆ ಶರಣಾದ ಗಂಡ
WhatsApp Group Join Now
Telegram Group Join Now

ಬೆಂಗಳೂರು : ಶಿವರಾತ್ರಿಯಂದೆ ಬೆಂಗಳೂರಿನಲ್ಲಿ ಘೋರವಾದ ಘಟನೆ ನಡೆದಿದ್ದು, ಪತಿ-ಪತ್ನಿ ನಡುವೆ ಕ್ಷುಲ್ಲಕ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆ ಮಾಡಿ ಬಳಿಕ ಮನನೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದ ಮುಬಾರಕ್ ನಗರದಲ್ಲಿ ನಡೆದಿದೆ.

ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪತಿ ಪತ್ನಿಗೆ ಹಿಂಸೆ ಕೊಡ್ತಿದ್ದ ಎಂದು ಪತ್ನಿ ಪೋಷಕರ ಬಳಿ ಆಳಲು ತೋಡಿಕೊಂಡಿದ್ದಾಳೆ.

ಮೃತರನ್ನು ಸುರೇಶ್ (40) ಹಾಗೂ ಈತನ ಪತ್ನಿ ಮಮತಾ (33) ಎಂದು ಗುರುತಿಸಲಾಗಿದೆ. ಲೈಂಗಿಕ ವಿಡಿಯೋ ತೋರಿಸಿ ವಿಡಿಯೋದಲ್ಲಿರುವಂತೆ ಸಹಕರಿಸುವಂತೆ ಆತ್ಮಹತ್ಯೆ ಮಾಡಿಕೊಂಡ ಸುರೇಶ್ ಪತ್ನಿ ಮಮತಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇದೆ ವಿಚಾರವಾಗಿ ಮಮತಾ ಪೋಷಕರ ಬಳಿ ಅಳಲು ತೋಡಿಕೊಂಡಿದ್ದಳು. ಲೈಂಗಿಕ ಕ್ರಿಯೆಗೆ ಸುರೇಶ್ ಹಪಹಪಿಸುತ್ತಿದ್ದನಂತೆ. ಲೈಂಗಿಕ ವಿಡಿಯೋ ತೋರಿಸಿ ವಿಡಿಯೋದಲ್ಲಿರುವಂತೆ ನನಗೆ ಸಹಕರಿಸು ಎಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ಮಮತಾ ಪೋಷಕರ ಬಳಿ ಸಂಕಷ್ಟ ಹೇಳಿಕೊಂಡಿದ್ದಳು.

ಆತ್ಮಹತ್ಯೆ ಮಾಡಿಕೊಂಡಿರುವ ಸುರೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆದರೆ ಇತ್ತೀಚಿಗೆ ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ ಇದರಿಂದ ಸುರೇಶ ಹಾಗೂ ಪತ್ನಿ ಮಮತಾ ನಡುವೆ ಆದಾಗ ಗಲಾಟೆ ನಡೆಯುತ್ತಿತ್ತು.

ಇಂದು ಗಲಾಟೆ ವಿಕೋಪಕ್ಕೆ ತಿರುಗಿ 6 ವರ್ಷದ ಮಗನ ಎದುರಲ್ಲೇ ಸುರೇಶ್ ಮಮತಾಳನ್ನು ಕೊಂದು ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!