Ad imageAd image

ಗಂಡ – ಹೆಂಡತಿ ಜಗಳ ನಡುವೆ ಬಂದ ಅತ್ತೆಯ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಸೂಸೆ

Bharath Vaibhav
ಗಂಡ – ಹೆಂಡತಿ ಜಗಳ ನಡುವೆ ಬಂದ ಅತ್ತೆಯ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಸೂಸೆ
CRIME
WhatsApp Group Join Now
Telegram Group Join Now

ಬೆಳಗಾವಿ : ನಾರ್ಮಲ್ ಆಗಿ ಅತ್ತೆ – ಸೊಸೆ ಗಲಾಟೆ ಆದರೆ ಅತ್ತೆನೇ ಮೇಲುಗೈ ಸಾಧಿಸುತ್ತಾರೆ. ಆದರೆ ಇಲ್ಲೊಬ್ಬ ಸೊಸೆ, ಅತ್ತೆ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಡಿ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಾನವ್ವ ಹುದಲಿ (80) ಹಲ್ಲೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ.ಹಲ್ಲೆಗೂ ಮುನ್ನ ತನ್ನ ಪತಿ ನಾಗರಾಜ್ ಬುಧವಾರ ರಾತ್ರಿ ಮಾವಿನಕಟ್ಟಿಯಲ್ಲಿರುವ ತನ್ನ ತವರು ಮನೆಯಲ್ಲಿ ಊಟಕ್ಕೆ ಹೋಗಿದ್ದ ಬಗ್ಗೆ ಪತ್ನಿ ಶಿಲ್ಪಾ ಸಿಟ್ಟಾಗಿ ಪತಿಯ ಜೊತೆ ಗಲಾಟೆಯಾಡುತ್ತಿದ್ದಳು.

ಈ ವೇಳೆ ಅತ್ತೆ ಜಾನವ್ವ ಗಂಡ ಹೆಂಡತಿಯ ಜಗಳದಲ್ಲಿ ಮೂಗುತೂರಿಸಿದ್ದಾರೆ, ಇದರಿಂದ ಇನ್ನಷ್ಟು ಸಿಟ್ಟಾದ ಶಿಲ್ಪ ಕೈಗೆ ಸಿಕ್ಕ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಅತ್ತೆ ಸೊಸೆ ನಡುವೆ ಗಲಾಟೆಯಾಡುತ್ತಲೇ ಇದ್ದರೂ.

ಅಲ್ಲದೇ ಇಬ್ಬರ ಗಲಾಟೆಯಿಂದಾಗಿ ಸಾಕಷ್ಟು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಹತ್ತಿದ್ದರು. ಆದರೆ ಈ ಬಾರಿ ಹಲ್ಲೆಗೆ ಮಟ್ಟಕ್ಕೆ ತಿರುಗಿದ್ದು, ಕೂಡಲೇ ಜನವ್ವರನ್ನು ನಾಗರಾಜ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಶಿಲ್ಪ ವಿರುದ್ಧ ಮಹಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದ್ರೆ ಶಿಲ್ಪ ಮಾತ್ರ ನಾನು ಯಾವುದೇ ಹಲ್ಲೆ ಮಾಡಿಲ್ಲ, ನಾನು ಜೈಲಿಗೂ ಬರಲ್ಲ ಎಂದು ಕೂತುಬಿಟ್ಟಿದ್ದಾರೆ

WhatsApp Group Join Now
Telegram Group Join Now
Share This Article
error: Content is protected !!