Ad imageAd image

ಯುವತಿಯ ಸಾಲದ ವಿಚಾರಕ್ಕೆ ಗಲಾಟೆ : ಇಬ್ಬರಿಗೆ ಚಾಕು ಇರಿತ 

Bharath Vaibhav
ಯುವತಿಯ ಸಾಲದ ವಿಚಾರಕ್ಕೆ ಗಲಾಟೆ : ಇಬ್ಬರಿಗೆ ಚಾಕು ಇರಿತ 
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ.

ಯುವತಿಯ ಸಾಲದ ವಿಚಾರಕ್ಕೆ ಗಲಾಟೆ ಆಗಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದ್ದು, ಜಗಳ ಬಿಡಿಸಲು ಬಂದ ಮತ್ತು ಸಾಲ ನೀಡಿದವನಿಗೆ ಇಬ್ಬರಿಗೂ ಚಾಕು ಇರಿದಿದ್ದಾರೆ.

ನಾಲ್ಕರಿಂದ ಐದು ಯುವಕರ ಗ್ಯಾಂಗ್ ನಿಂದ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ಜಗಳ ಬಿಡಿಸಲು ಬಂದ ಚೇತನ್ ಮತ್ತು ಸಾಲ ನೀಡಿದ ಸುದೀಪ್ ಇಬ್ಬರಿಗೂ ಚಾಕು ಇರಿದಿದ್ದಾರೆ.

ಸದ್ಯ ಜಗಳ ಬಿಡಿಸಲು ಬಂದ ಚೇತನಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸಾಲ ತೆಗೆದುಕೊಂಡ ಸುದೀಪ್ ನೆಲಮಂಗಲದ ಜ್ಯೂಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ.

ಎರಡು ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳು ಪರಿಚಯವಾಗಿ ಪ್ರೀತಿಸಿದ್ದರು. ಈ ನಡುವೆ ಯುವತಿಗೆ 2000 ಹಣ ಸುದೀಪ್ ಸಾಲ ನೀಡಿದ್ದ.

ಕೆಲ ತಿಂಗಳ ಹಿಂದೆ ಯುವತಿ ಮತ್ತು ಸುದೀಪ್ ನಡುವೆ ಬ್ರೇಕ್ ಅಪ್ ಆಗಿತ್ತು, ಯುವತಿಗೆ ಹಣ ವಾಪಸ್ ನೀಡುವಂತೆ ಸುದೀಪ್ ಕೇಳಿದ್ದ. ರೂ.2000 ನೀಡಿದ್ದಾಳೆ, ಉಳಿದ ಒಂದು ಸಾವಿರ ರೂಪಾಯಿ ಕೊಡುವಂತೆ ಸುದೀಪ್ ಯುವತಿಗೆ ಫೋನ್ ಮಾಡಿದ್ದಾನೆ.ಈ ವಿಚಾರಕ್ಕೆ ಸುದೀಪ್ ಬಳಿ ಬಂದು 4-5 ಯುವಕರು ಗಲಾಟೆ ಮಾಡಿದ್ದಾರೆ.

ಯುವತಿ ಹಣ ನೀಡಿದರು ಮತ್ತೆ ಹಣ ಕೇಳ್ತಿಯ ಎಂದು ಗಲಾಟೆ ಮಾಡಿದ್ದಾರೆ. ಮೂರು ದಿನದ ಹಿಂದೆ ಸುದೀಪ್ ಮೇಲೆ ಯುವಕರು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ಬಿಡಿಸಲು ಬಂದ ಚೇತನ್ ಹೊಟ್ಟೆಗೆ ಈ ಒಂದು ಗ್ಯಾಂಗ್ ಚಾಕು ಇರಿದಿದೆ.

ಸುದೀಪ್ ಬೆನ್ನಿಗೂ ಕೂಡ ಚಾಕು ಇರಿದು ಯುವಕರ ಗ್ಯಾಂಗ್ ಎಸ್ಕೇಪ್ ಆಗಿದೆ.ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!