ಸಿಂದನೂರು :- ತಾಲೂಕು ವ್ಯಾಪ್ತಿಗೆ ಬರುವ ರೌಡಕುಂದ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕರ ನಿವೃತ್ತಿ ಸತತ 25 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ,ಶ್ರೀ ದೇವೇಗೌಡ ಗುರುಗಳು .. ಶ್ರೀ ಭೀಮಶೇನ ಗುರುಗಳು.. ಶ್ರೀ ಗಂಗಪ್ಪ ಗುರುಗಳು.. ಇವರು ಇಂದು ನಿವೃತ್ತಿ ಹೊಂದಿದ್ದಾರೆ .
ಈ ಹಿನ್ನೆಲೆಯಲ್ಲಿ ಊರಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ನೆಚ್ಚಿನ ಗುರುಗಳನ್ನು ತೆರೆದ ವಾಹನದಲ್ಲಿ ಕೂರಿಸಿ ಕೊರಳು ತುಂಬಾ ಹೂವಿನ ಹಾರಗಳನ್ನು ಹಾಕಿ ಸಿಂಗರಿಸಿ. ಡೊಳ್ಳು. ಬಾಜು ಭಜಂತ್ರಿ. ವಿದ್ಯಾರ್ಥಿಗಳ ಕೋಲು ಕುಣಿತದೊಂದಿಗೆ ಊರಿಗೆ ಊರೇ ಸೇರಿ ಊರ ತುಂಬಾ ಮೆರವಣಿಗೆ ಮಾಡುವ ಮೂಲಕ ತಮ್ಮ ನೆಚ್ಚಿನ ಗುರುಗಳಿಗೆ ಪ್ರೀತಿ ತೋರಿಸಿದ್ದಾರೆ. ಶಿಕ್ಷಕರು ತಮ್ಮ ಶಾಲೆಯನ್ನು ಬಿಟ್ಟು ಹೋಗುತ್ತಿರುವುದಕ್ಕೆ ಆ ಊರಿನ ಗ್ರಾಮಸ್ಥರು ವಿದ್ಯಾರ್ಥಿಗಳೆಲ್ಲರೂ ಭಾವುಕರಾಗಿದ್ದಾರೆ ಮುಂದೆ ಇಂತಹ ಶಿಕ್ಷಕರು ನಮ್ಮ ಊರಿನ ಶಾಲೆಗೆ ಸಿಗಲಿ ಎನ್ನುವ ಮೂಲಕ ನಮ್ಮ ಗುರುಗಳ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ್ದಾರೆ.
ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ. ನಬೀ. ಸರ್’ ಬಂಗಾರಿ ಕ್ಯಾಂಪ್. ಮಾತನಾಡಿ ಈ ಮೂವರ ಶಿಕ್ಷಕರು ಶಾಲೆಗೆ ಅವಿಷ್ಮರಣೆಯ ಸೇವೆ ಸಲ್ಲಿಸಿದ್ದಾರೆ ಇವರ ಶ್ರಮದಿಂದ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.. ಇನ್ನೋರ್ವ ಅತಿಥಿ ಎಸ್ ಡಿ ಎಂ ಸಿ. ಅಧ್ಯಕ್ಷರು- ಮಾತನಾಡಿ ಮಕ್ಕಳ ಸುಂದರವಾದ ಬಹುಷ್ಯ ರೂಪಿಸಿದ ಇವರ ವಿಶ್ರಾಂತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ – ಮುಖ್ಯ ಗುರುಗಳಾದ ಶ್ರೀ.ನಬೀ. ಸರ್. ಬಂಗಾರಿ ಕ್ಯಾಂಪ್.. ಎಸ್ ಡಿ ಎಂ ಸಿ. ಅಧ್ಯಕ್ಷರಾದ – ಕರಿಯಪ್ಪ..ಉಪ್ಪಾರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ -ಶ್ರೀಮತಿ ಅನ್ನಪೂರ್ಣೇಶ್ವರಿ.. ಜಿಲ್ಲಾ ಪಂಚಾಯತ್ ಸದಸ್ಯರಾದ – ಶ್ರೀ. ಬಸವರಾಜ ಹಿರೇಗೌಡ್ರು..
ಹಾಗೂ ಹಳೆ ವಿದ್ಯಾರ್ಥಿಗಳಾದ – ನಿರುಪಾದಿ- ದುರ್ಗೇಶ್. ಕುಡಿದಿನ್ನಿ – ಯರಿಸ್ವಾಮಿ.ಕುಡಿದಿನ್ನಿ- ನಾಗರಾಜ್ -ಭೀಮಾ. ಡಾಣಾಪುರ್ – ಮೈಬು- ಮಾರುತಿ.ಕಾರಟಿಗಿ- ಶಾಹಿಲ್- ರವಿ. ದೇವರಮನಿ – ಹಾಗೂ ಊರಿನ ಗ್ರಾಮಸ್ಥರು ಇದ್ದರು.
ವರದಿ:- ಬಸವರಾಜ. ಬುಕ್ಕನಹಟ್ಟಿ